ಶೇಂಗಾ ಬೀಜ (ಕಡ್ಲೆ ಬೀಜ) ಎಂದರೆ ಎಲ್ಲರಿಗೂ ಇಷ್ಟ. ಹೀಗಾಗಿ ಸಂಜೆ ಟೀ ಜೊತೆಗೆ ಮಸಾಲಾ ಶೇಂಗಾ ಫ್ರೈ ಮಾಡಿಕೊಂಡು ಸವಿಯಿರಿ. ನಿಮಗಾಗಿ ಮಸಾಲಾ ಶೇಂಗಾ ಮಾಡುವ ವಿಧಾನ ಇಲ್ಲಿದೆ….
ಬೇಕಾಗುವ ಸಾಮಗ್ರಿಗಳು
1. ಕಡಲೆ ಹಿಟ್ಟು – 1/2 ಕಪ್
2. ಅಕ್ಕಿ ಹಿಟ್ಟು – 1/4 ಕಪ್
3. ಶುಂಠಿ,ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ
4. ಖಾರದ ಪುಡಿ – ಒಂದೂವರೆ ಚಮಚ
5. ಅರಿಶಿಣ – ಚಿಟಿಕೆ
6. ಉಪ್ಪು – ರುಚಿಗೆ ತಕ್ಕಷ್ಟು
7. ಇಂಗು -ಚಿಟಿಕೆ
8. ಎಣ್ಣೆ
9. ಶೇಂಗಾ ಬೀಜ – 2 ಕಪ್
Advertisement
Advertisement
ಮಾಡುವ ವಿಧಾನ
* ಒಂದು ಬೌಲ್‍ಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಚಿಟಿಕೆ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈಗ ಮೂರು ಚಮಚ ಬಿಸಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ.
* ಶೇಂಗಾ ಬೀಜವನ್ನು ಹಾಕಿ, ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷ ನೆನೆಯಲು ಬಿಡಿ.
* ನಂತರ 2 ಚಮಚ ಅಕ್ಕಿ ಹಿಟ್ಟು ಹಾಕಿ ಮತ್ತೆ ಕಲಸಿಕೊಳ್ಳಿ (ನೀರು ಹಾಕಬಾರದು)
* ಸ್ಟೌವ್ ಮೇಲೆ ಎಣ್ಣೆ ಕಾಯಲು ಬಿಡಿ, ಎಣ್ಣೆ ಬಿಸಿಯಾಗುತ್ತಿದ್ದಂತೆ ಕಲಸಿದ್ದ ಶೇಂಗಾ ಬೀಜವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ಮಸಾಲಾ ಶೇಂಗಾ ಸವಿಯಲು ಸಿದ್ಧ