ನವದೆಹಲಿ: ಭಾರತದಲ್ಲಿ ತಯಾರಿಸಿದ ಮಾರುತಿ ಸುಜುಕಿ ವ್ಯಾಗನ್ ಆರ್ (Wagon R) ಮತ್ತು ಆಲ್ಟೊ K10 (Alto K10) ಗ್ಲೋಬಲ್ ಎನ್‌ಸಿಎಪಿ(Global NCAP) ಕ್ರ್ಯಾಶ್ ಟೆಸ್ಟ್(Crash Test)ನಲ್ಲಿ ಕಳಪೆ ಸಾಧನೆ ತೋರಿ ಕಾರು ಸುರಕ್ಷತೆ ವಿಷಯದಲ್ಲಿ ಭಾರೀ ನಿರಾಸೆ ಮೂಡಿಸಿವೆ.
ವ್ಯಾಗನ್ ಆರ್
ಸೇಫರ್ ಕಾರ್ಸ್ ಫಾರ್ ಇಂಡಿಯಾ ಅಭಿಯಾನದ (Safercarsforindia) ಅಡಿಯಲ್ಲಿ ಗ್ಲೋಬಲ್ ಎನ್‌ಸಿಎಪಿ ವ್ಯಾಗನ್ ಆರ್ ಕಾರನ್ನು ಕ್ರ್ಯಾಶ್ ಟೆಸ್ಟ್ ಮಾಡಿದೆ. ಈ ಟೆಸ್ಟ್‌ನಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ ಕೇವಲ ಒಂದು ಸ್ಟಾರ್ ರೇಟಿಂಗ್ ಮತ್ತು ಮಕ್ಕಳ ರಕ್ಷಣೆಗಾಗಿ ಸೊನ್ನೆ ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಈ ಹಿಂದೆ ವ್ಯಾಗನ್ ಆರ್ ಕಾರನ್ನು 2019ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿತ್ತು. ಆಗ ಈ ಕಾರಿಗೆ 2 ಸ್ಟಾರ್ ರೇಟಿಂಗ್ ಸಿಕ್ಕಿತ್ತು. ಇದನ್ನೂ ಓದಿ: ಅವಘಡ ತಪ್ಪಿಸಲು ರೈಲನ್ನೇ ನಿಲ್ಲಿಸಿದ ದಿಟ್ಟ ಮಹಿಳೆ!
Advertisement
ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ವ್ಯಾಗನ್ ಆರ್ 34ಕ್ಕೆ 19.69 ಅಂಕಗಳನ್ನಷ್ಟೇ ಪಡೆಯಲು ಸಫಲವಾಯಿತು. ಈ ಕಾರು ಚಾಲಕ ಮತ್ತು ಪ್ರಯಾಣಿಕರಿಗೆ ತಲೆ ಮತ್ತು ಕುತ್ತಿಗೆ ರಕ್ಷಣೆಯ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಆದರೆ ಚಾಲಕನ ಎದೆಯ ಭಾಗದ ಸುರಕ್ಷತೆಯು ತುಂಬಾ ದುರ್ಬಲವಾಗಿದೆ. ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದ ಫೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ
Advertisement
Advertisement
ಮಕ್ಕಳ ಸುರಕ್ಷತೆಯ ವಿಭಾಗದಲ್ಲಿ ವ್ಯಾಗನ್ ಆರ್ 49 ರಲ್ಲಿ ಕೇವಲ 3.40 ಅಂಕಗಳನ್ನು ಪಡೆದುಕೊಂಡಿದೆ. ಅಂದರೆ ಈ ವಿಭಾಗದಲ್ಲಿ ಕಾರು 0 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ (ISOFIX Child Seat Mount) ಅಥವಾ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ (Child Restraint System) ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ.
Advertisement
ಆಲ್ಟೊ K10
ಗ್ಲೋಬಲ್ ಎನ್‌ಸಿಎಪಿ ಆಲ್ಟೊ K10 ಕಾರನ್ನೂ ಕ್ರ್ಯಾಶ್ ಟೆಸ್ಟ್ ಮಾಡಿದೆ. ಆಲ್ಟೊ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ವ್ಯಾಗನ್ ಆರ್ ಕಾರಿಗಿಂತ ಸ್ವಲ್ಪ ಉತ್ತಮ ಸಾಧನೆ ತೋರಿ 2 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಆದರೆ ಮಕ್ಕಳ ಸುರಕ್ಷತೆಯಲ್ಲಿ ಶೂನ್ಯ ರೇಟಿಂಗ್ ಪಡೆದಿದೆ.
ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಆಲ್ಟೊ K10 34ಕ್ಕೆ 21.67 ಅಂಕಗಳನ್ನು ಗಳಿಸಿದರೆ, ಮಕ್ಕಳ ಸುರಕ್ಷತೆಯ ವಿಭಾಗದಲ್ಲಿ 49ಕ್ಕೆ 3.52 ಅಂಕಗಳನ್ನಷ್ಟೇ ಗಳಿಸಿದೆ. ಈ ಕಾರಿನಲ್ಲೂ ಕೂಡ ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಅಥವಾ ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ ಇಲ್ಲ. ಮಾರುತಿ ಸುಜುಕಿ ಕಂಪನಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಿದೆ.