ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಎಲ್ಲೆಡೆ ಉಗ್ರರನ್ನು ಸಂಹಾರ ಮಾಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇತ್ತ ಯೋಧ ಗುರು ಅವರು ಕೊನೆಯಲ್ಲಿ ಪ್ರವಾಸಕ್ಕೆ ಹೋಗಿದ್ದ ಫೋಟೋ, ವಿಡಿಯೋ ಲಭ್ಯವಾಗಿದೆ.
ಹುತಾತ್ಮ ಯೋಧ ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಆಗ ಭಾನುವಾರ ಆರ್ಮಿಗೆ ತೆರಳುವ ಮುನ್ನ ಸ್ನೇಹಿತ ನಾಗೇಶ್ ಜೊತೆಗೆ ಮೈಸೂರಿನ ಹಿನ್ನೀರಿಗೆ ಪ್ರವಾಸಕ್ಕೆ ಹೋಗಿದ್ದರು. ಸ್ನೇಹಿತ ಮಾತ್ರವಲ್ಲದೇ ತಮ್ಮ ಪತ್ನಿ ಕಲಾವತಿ ಅವರನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ಅವರ ಸ್ನೇಹಿತ ಕೂಡ ತಮ್ಮ ಪತ್ನಿ ಮತ್ತು ಮಗುವಿನ ಜೊತೆ ಬಂದಿದ್ದರು. ಎಲ್ಲರೂ ಒಟ್ಟಿಗೆ ಇದ್ದಾಗ ತೆಗೆದಿದ್ದ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ಸ್ನೇಹಿತ ಹಾಗೂ ಪತ್ನಿಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಬಳಿಕ ಎಲ್ಲರೂ ಒಟ್ಟಿಗೆ ಹಿನ್ನೀರಿನಲ್ಲಿ ಬೋಟಿಂಗ್ ಮಾಡುತ್ತಿದ್ದಾಗ ವಿಡಿಯೋ ಮಾಡಿದ್ದಾರೆ. ಇದನ್ನೂ ಓದಿ: ಗುರು ಕಳುಹಿಸಿದ್ದ ಸೆಲ್ಫಿ ವಿಡಿಯೋ ನೋಡಿ ಭಾವುಕರಾದ ಗೆಳೆಯರು, ಕುಟುಂಬಸ್ಥರು
Advertisement
Advertisement
ಇತ್ತೀಚೆಗಷ್ಟೆ ಹುತಾತ್ಮ ಯೋಧ ಗುರು ಅವರು ತಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಒಂದು ಸೆಲ್ಫಿ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಆ ವಿಡಿಯೋದಲ್ಲಿ ಅವರು ಇಬ್ಬನಿಯಲ್ಲಿ ಕಾಶ್ಮೀರ್ ಎಂದು ಬರೆದು ಅಲ್ಲಿ ನಿಂತು ಹಾಯ್ ಮಾಡಿದ್ದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv