ಕನ್ನಡದ ಹೆಸರಾಂತ ನಟ ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin) ಸಿನಿಮಾದ ಟೀಸರ್ (Teaser) ಎರಡ್ಮೂರು ದಿನಗಳಿಂದ ಟ್ರೆಂಡಿಂಗ್ ನಲ್ಲಿದೆ. ಕೋಟಿ ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷೆಗಳಲ್ಲೂ ಸಿನಿಮಾ ಬಗ್ಗೆ ಮಾತನಾಡುವಂತಾಗಿದೆ. ಹಾಗಾಗಿ ಧ್ರುವ ಸರ್ಜಾ ಬೇರೆ ಸ್ಟಾರ್ ನಟರ ಜೊತೆ ಪೈಪೋಟಿಗೆ ಇಳಿದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಈ ಹಿಂದಿ ಕನ್ನಡದ ಚಾರ್ಲಿ 777, ಕೆಜಿಎಫ್ 2, ಕಾಂತಾರ, ಕಬ್ಜ, ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಗಳು ಕೂಡ ಟ್ರೆಂಡಿಂಗ್ ಆಗಿದ್ದವು. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಯಶ್, ಉಪೇಂದ್ರ ಹಾಗೂ ಸುದೀಪ್ ಕೂಡ ಭಾರತೀಯ ಸಿನಿಮಾ ರಂಗದ ಹೆಸರಾಂತ ನಟರ ಜೊತೆ ಪೈಪೋಟಿಗೆ ಇಳಿದಿದ್ದರು. ಕನ್ನಡದ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿದ್ದವು. ಇದೀಗ ಮಾರ್ಟಿನ್ ಆ ಸಿನಿಮಾದ ಸಾಲಿಗೆ ಸೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ
ಮಾರ್ಟಿನ್ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದ್ದಂತೆಯೇ ಧ್ರುವ ಸರ್ಜಾ ಕೂಡ ಭಾರತೀಯ ಸಿನಿಮಾ ರಂಗದ ಸ್ಟಾರ್ ನಟರ ಜೊತೆ ಪೈಪೋಟಿಗೆ ಇಳಿದಿದ್ದಾರೆ ಎನ್ನುವ ಮಾತು ಬಂದಿದ್ದು ಸಹಜ. ಅದಕ್ಕೆ ಸ್ವತಃ ಧ್ರುವ ಅವರೇ ಉತ್ತರ ನೀಡಿದ್ದಾರೆ. ತಾವು ಯಾವುದೇ ಕಾರಣಕ್ಕೂ ಯಾವುದೇ ನಟರ ಜೊತೆ ಪೈಪೋಟಿಗೆ ಇಳಿಯಲಾರೆ. ನನ್ನ ಸಿನಿಮಾ ಮತ್ತು ನಾನು ಅಂದಷ್ಟೇ ಉತ್ತರಿಸಿದ್ದಾರೆ.
ಎ.ಪಿ ಅರ್ಜುನ್ ಮತ್ತು ಧ್ರುವ ಕಾಂಬಿನೇಷನ್ ನ ಚಿತ್ರಗಳು ಗೆಲ್ಲುತ್ತವೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಹಾಗಾಗಿ ಮಾರ್ಟಿನ್ ಕೂಡ ಭರ್ಜರಿ ಗೆಲ್ಲುತ್ತದೆ ಎಂದು ಸಿನಿ ಪಂಡಿತರ ಲೆಕ್ಕಾಚಾರ. ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ಅದಕ್ಕಾಗಿ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.