ನವದೆಹಲಿ: ಯುವತಿಯೊಬ್ಬಳನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ವಿವಾಹಿತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ರೋಹಿತ್ ಗುಪ್ತಾ ಹಾಗೂ ಮೃತ ದುರ್ದೈವಿಯನ್ನು ಸಲ್ಮಾ ಎಂದು ಗುರುತಿಸಲಾಗಿದೆ. ಈತ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಯುವತಿ ಕರೋಲ್ ಭಾಗ್ನಲ್ಲಿ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.
ರೋಹಿತ್ ಮೃತ ಯುವತಿ ಜೊತೆ ಸಂಬಂಧ ಹೊಂದಿದ್ದನು. ಆದರೆ ಇದೀಗ ಆಕೆಯ ಜೊತೆಗಿನ ಸಂಬಂಧ ಬೇರ್ಪಟ್ಟಿದೆ. ಹೀಗಾಗಿ ಹತಾಶೆಗೊಂಡ ರೋಹಿತ್ ಯುವತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ. ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು
ಅಕ್ಟೋಬರ್ 28ರಂದು ಜೆಜೆ ಕಾಲೋನಿಯಲ್ಲಿ ಯುವತಿಯೊಬ್ಬಳು ಸಾವಿಗೀಡಾಗಿರುವ ವಿಚಾರವೊಂದು ಪೊಲೀಸರಿಗೆ ತಿಳಿಯುತ್ತಿದೆ. ಆ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದಾಗ ಶೂಟೌಟ್ಗೊಳಗಾದ ಸ್ಥಿತಿಯಲ್ಲಿ ಪತ್ತೆಯಾದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇತ್ತ ಆರೋಪಿಗಳ ಪತ್ತೆಗಾಗಿ ಸಿಸಿಟಿವಿ (CCTV) ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ ವಿವಿಧ ಸ್ಥಳಗಳು ಮತ್ತು ಸಂಭವನೀಯ ಅಡಗುತಾಣಗಳಲ್ಲಿ ದಾಳಿ ನಡೆಸಲಾಯಿತು. ವಿವರವಾದ ತನಿಖೆಯ ನಂತರ, ಆರೋಪಿಯನ್ನು ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಬಂಧಿಸಲಾಯಿತು. ಇದನ್ನೂ ಓದಿ: ಹಾಸ್ಟೆಲ್ನಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ನಿರಂತರ ವಿಚಾರಣೆಯ ವೇಳೆ, ಅವನು ಸಾವಿಗೀಡಾದ ಯುವತಿಯೊಂದಿಗೆ ಸಂಬಂಧ ಹೊಂದಿದ್ದನೆಂದು ಬಹಿರಂಗಪಡಿಸಿದನು. ಆಕೆ ನನ್ನ ಜೊತೆ ಬ್ರೇಕಪ್ ಮಾಡಿಕೊಂಡಿದ್ದರಿಂದ ಹತಾಶೆಗೊಂಡು ಕೊಲೆ ಮಾಡಲು ನಿರ್ಧರಿಸಿದನು. ಅಪರಾಧ ಎಸಗಿದ ಬಳಿಕ ಬೇರೆ ಬೇರೆ ಹೊಟೇಲ್ಗಳಲ್ಲಿ ತಲೆಮರೆಸಿಕೊಂಡಿದ್ದ. ಆತ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಸ್ಥಳ ಬದಲಿಸುತ್ತಿದ್ದನು. ಕೊಲೆಗೆ ಬಳಸಲಾದ ಆಯುಧವನ್ನು ಚರಂಡಿಗೆ ಎಸೆದಿರುವುದಾಗಿ ತಿಳಿದುಬಂದಿದೆ.