– ತಕ್ಷಣ ಮದ್ವೆ ಕ್ಯಾನ್ಸಲ್, ಅಂತಿಮ ಕ್ಷಣದಲ್ಲಿ ಟ್ವಿಸ್ಟ್
ಗಾಂಧಿನಗರ: ತಾನು ಮದುವೆಯಾಗಬೇಕಿದ್ದ ಭಾವಿ ಪತ್ನಿ ಕಾಲ್ ಗರ್ಲ್ ಎಂದು ತಿಳಿದು ಯುವಕ ಅಚ್ಚರಿಗೊಂಡು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದ. ತಕ್ಷಣ ಕ್ಷಮೆ ಕೇಳಿ ಮತ್ತೆ ಮದುವೆಗೆ ಒಪ್ಪಿಕೊಂಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಗುಜರಾತ್ನ ಸೂರತ್ ನಗರದ ಯುವಕನೊಬ್ಬ ಒಂದು ವರ್ಷದ ಹಿಂದೆ ಅದೇ ನಗರದ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಹೀಗಾಗಿ ಇಬ್ಬರು ಪ್ರತಿದಿನ ಫೋನಿನಲ್ಲಿ ಚಾಟ್ ಮಾಡುತ್ತಿದ್ದರು. ಅದೇ ರೀತಿ ಯುವತಿ ತನ್ನ ಫೋಟೋಗಳನ್ನು ಭಾವಿ ಪತಿಗೆ ಕಳುಹಿಸಿದ್ದಳು. ಅದನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ.
Advertisement
Advertisement
ಕೆಲವು ದಿನಗಳ ನಂತರ ಯುವಕನ ವಾಟ್ಸಪ್ಗೆ ಅಪರಿಚಿತ ನಂಬರಿನಿಂದ ಮೆಸೇಜ್ ಬಂದಿದೆ. ಅಲ್ಲದೇ ಮತ್ತೊಬ್ಬ ವ್ಯಕ್ತಿ ಕೆಲವು ಕಾಲ್ ಗರ್ಲ್ ಫೋಟೋಗಳನ್ನು ಕಳುಹಿಸಿದ್ದಾನೆ. ಆ ಫೋಟೋಗಳಲ್ಲಿ ಯುವಕ ತಾನು ನಿಶ್ಚಿತಾರ್ಥವಾಗಿದ್ದ ಹುಡುಗಿಯ ಅರೆಬೆತ್ತಲೆ ಫೋಟೋ ನೋಡಿ ಗಾಬರಿಯಾಗಿದ್ದಾನೆ. ಇದರಿಂದ ಆತ ನಾನು ವೇಶ್ಯೆವಾಟಿಕೆ ಮಾಡುತ್ತಿರುವ ಯುವತಿಯನ್ನು ಮದುವೆಯಾಗುತ್ತಿದ್ದೇನೆ ಎಂದುಕೊಂಡಿದ್ದಾನೆ.
Advertisement
ತಕ್ಷಣ ಯುವತಿಗೆ ಫೋನ್ ಮಾಡಿ, ನನಗೆ ಯಾಕೆ ಮೋಸ ಮಾಡಿದೆ ಎಂದು ಕೇಳಿದ್ದಾನೆ. ಆಗ ಯುವತಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾಳೆ. ಆದರೆ ಯುವಕ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಕ್ಯಾನ್ಸಲ್ ಮಾಡಿದ್ದಾನೆ. ಗಾಬರಿಯಾದ ಯುವತಿ ಭಾವಿ ಪತಿಯ ಬಳಿ ತಮಗೆ ಬಂದಿರುವ ಫೋಟೋ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಆಗ ಯುವಕ ತನ್ನ ವಾಟ್ಸಪ್ಗೆ ಬಂದಿದ್ದ ಫೋಟೋಗಳನ್ನು ಯುವತಿಗೆ ಕಳುಹಿಸಿದ್ದಾನೆ. ಆಗ ಯುವತಿ ಈ ಫೋಟೋಗಳನ್ನು ಕಾಲ್ ಗರ್ಲ್ ರೀತಿ ಮಾರ್ಫಿಂಗ್ ಮಾಡಲಾಗಿದೆ ಎಂದು ಖಚಿತ ಪಡಿಸಿದ್ದಾಳೆ. ಆಗ ಹುಡುಗ ಯಾರೋ ಮದುವೆ ನಿಲ್ಲಿಸಲು ಈ ರೀತಿ ಮಾಡಿದ್ದಾರೆ ಎಂದು ಭಾವಿ ಪತ್ನಿಯ ಬಳಿ ಕ್ಷಮೆ ಕೇಳಿದ್ದಾನೆ.
Advertisement
ಕೊನೆಗೆ ಇಬ್ಬರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದು, ಐಪಿ ವಿಳಾಸದ ಮೂಲಕ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ.