ಬೆಂಗಳೂರು: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ದೀಪಿಕಾ ಇಂದು ತಮ್ಮ ಬೆಂಗಳೂರಿನ ಮನೆಯಲ್ಲಿ ಪೂಜೆ ಮಾಡಿದ್ದಾರೆ.
ದೀಪಿಕಾ ಪಡುಕೋಣೆ ಇಂದು ತಮ್ಮ ಬೆಂಗಳೂರಿನ ನಿವಾಸದಲ್ಲಿ ಸಬ್ಯಸಾಚಿ ಮುಖರ್ಜಿ ವಿನ್ಯಾಸ ಮಾಡಿದ ಸೂಟ್ ಧರಿಸಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ತಮ್ಮ ಇನ್‍ಸ್ಟಾಗ್ರಾಂನಲ್ಲಿ ದೀಪಿಕಾ ಪೂಜೆ ಮಾಡುತ್ತಿರುವ ಫೋಟೋ ಹಾಗೂ ಕುಟುಂಬದವರ ಜೊತೆಯಿರುವ ಫೋಟೋವನ್ನು ಸಬ್ಯಸಾಚಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಸಬ್ಯಸಾಚಿ ಅವರು ತನ್ನ ಇನ್‍ಸ್ಟಾಗ್ರಾಂನಲ್ಲಿ ದೀಪಿಕಾ ಫೋಟೋ ಹಾಕಿ ಅದಕ್ಕೆ, “ಡಿಯರ್ ದೀಪಿಕಾ, ಒಂದು ಹೊಸ ಹಾಗೂ ಉತ್ಸಾಹ ಜೀವನ ನಿಮಗೆ ಶುರುವಾಗಿದೆ. ಸಬ್ಯಸಾಚಿ ಕಡೆಯಿಂದ ನಿಮಗೆ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Advertisement
Advertisement
ದೀಪಿಕಾ ಹಾಗೂ ರಣವೀರ್ ಮದುವೆಯ 10 ದಿನದ ಮೊದಲು ದೀಪಿಕಾ ಅವರ ತಾಯಿ ಉಜ್ಜಲ ಪಡುಕೋಣೆ ಇಬ್ಬರಿಗಾಗಿ ನಂದಿ ಪೂಜಾ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ ಎಂದು ವರದಿಯಾಗಿದೆ.
ರಣ್‍ವೀರ್ ಹಾಗೂ ದೀಪಿಕಾ ಈ ತಿಂಗಳು 14 ಹಾಗೂ 15 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ಇಟಲಿಯ ಕೋಮೋ ಸಿಟಿಯಲ್ಲಿ ಈ ಮದುವೆ ನಡೆಯಲಿದೆ. ನಂತರ ಬೆಂಗಳೂರು ಹಾಗೂ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಸಲು ಕುಟುಂಬ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv