ಹೈದರಾಬಾದ್: ವಧುವಿನ (Bride) ಮನೆಯವರು ಸ್ನೇಹಿತರಿಗೆ ಊಟಕ್ಕೆ ಚಿಕನ್ (Chicken) ನೀಡದ್ದಕ್ಕೆ ವರನೊಬ್ಬ (Groom) ಮದುವೆಯನ್ನೇ (Marriage) ರದ್ದುಗೊಳಿಸಿದ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.
ಹೈದರಾಬಾದ್‍ನ ಜೀಡಿಮೆಟ್ಲಾ ಉಪ ಪ್ರದೇಶವಾದ ಶಹಪುರ್ ನಗರದಲ್ಲಿ ಈ ಘಟನೆ ನಡೆದಿದೆ. ತೆಲಂಗಾಣಕ್ಕೆ ಸೇರಿದ ವರನಿಗೆ ಬಿಹಾರ ಮೂಲದ ವಧುವಿನ ಜೊತೆ ಮದುವೆ ನಿಶ್ಚಯವಾಗಿತ್ತು. ವರನ ಕಡೆಯವರು ಮದುವೆಯ ಅಡುಗೆ ಜವಾಬ್ದಾರಿಯನ್ನು ವಧುವಿನ ಕಡೆಯವರಿಗೆ ವಹಿಸಿದ್ದರು. ಆದರೆ ವಧುವಿನ ಮನೆಯವರು ಮನೆ ಕಟ್ಟುನಿಟ್ಟಾದ ಸಸ್ಯಹಾರಿಗಳಾಗಿದ್ದರು.
Advertisement
Advertisement
ವಿವಾಹಕ್ಕೂ ಮೊದಲು ರಿಸೆಪ್ಶನ್ ಪಾರ್ಟಿ ಏರ್ಪಡಿಸಿದ್ದರು. ಈ ವೇಳೆ ವಧುವಿನ ಕಡೆಯವರು ಸಸ್ಯಹಾರಿಗಳಾಗಿದ್ದರಿಂದ ಅವರು ಊಟಕ್ಕೆ ವಿಶೇಷವಾಗಿ ಸಸ್ಯಹಾರಿಯ ತಿಂಡಿಗಳನ್ನೆ ಮಾಡಿದ್ದರು. ಯಾವುದೇ ಬಗೆಯ ನಾನ್‍ವೆಜ್ ತಿಂಡಿಗಳನ್ನು ಮಾಡಿರಲಿಲ್ಲ.
Advertisement
ರಿಸೆಪ್ಶನ್ ಮುಗಿಯುತ್ತಿದ್ದಂತೆ ವರನ ಸ್ನೇಹಿತರು ಊಟಕ್ಕೆಂದು ಬಂದರು. ಈ ವೇಳೆ ನಾನ್ ವೆಜ್ ವ್ಯವಸ್ಥೆ ಮಾಡದಿರುವುದನ್ನು ಗಮನಿಸಿ ಆಯೋಜಕರೊಂದಿಗೆ ಜಗಳ ಮಾಡಿದ್ದಾರೆ. ಈ ವಿಷಯ ವಧುವಿನ ಕಡೆಯವರಿಗೂ ತಲುಪಿದೆ. ಈ ವೇಳೆ ವಧುವಿನ ಕಡೆಯವರಿಗೂ ವರನ ಸ್ನೇಹಿತರಿಗೂ ಜಗಳವಾಗಿದೆ. ಇದರಿಂದಾಗಿ ವರನ ಸ್ನೇಹಿತರೂ ಕೋಪಗೊಂಡು ಊಟವನ್ನು ಮಾಡದೇ ಅಲ್ಲಿಂದ ಹಾಗೇ ಹೊರಟಿದ್ದಾರೆ. ಇದನ್ನೂ ಓದಿ: ಗಡಿಪಾರು ಆದೇಶದ ನೋಟಿಸ್ ನೋಡಿದ ಆರೋಪಿ- ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
Advertisement
ಈ ವಿಷಯ ತಿಳಿದ ವರ ಹಾಗೂ ಅವನ ಕುಟುಂಬದವರು ವಧುವಿನ ಕುಟುಂಬದವರ ಮೇಲೆ ಕೋಪಗೊಂಡಿದ್ದಾರೆ. ಅಷ್ಟೇ ಅಲ್ಲದೇ ಮದುವೆಯನ್ನು ರದ್ದುಗೊಳಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸುವವರೆಗೂ ಸಮಸ್ಯೆ ಬಗೆಹರಿಯಲಿಲ್ಲ. ಇದನ್ನೂ ಓದಿ: ಡಿಸೆಂಬರ್ 1 ರಿಂದ ಮಾರುಕಟ್ಟೆಗೆ ಟಿಜಿಟಲ್ ರುಪಿ – ಬೆಂಗ್ಳೂರಿನಲ್ಲೇ ಮೊದಲ ಪ್ರಯೋಗ