DistrictsKarnatakaLatestMain PostShivamogga

ಗಡಿಪಾರು ಆದೇಶದ ನೋಟಿಸ್ ನೋಡಿದ ಆರೋಪಿ- ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ: ಹಲವು ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೋಬ್ರಾ ಅಲಿಯಾಸ್ ಸುಹೇಲ್ ಎಂಬ ಆರೋಪಿಗೆ ಪೊಲೀಸ್ ಇಲಾಖೆಯಿಂದ 2 ವರ್ಷ ಗಡಿಪಾರು ಮಾಡಲು ಆದೇಶಿಸಿದೆ. ಗಡಿಪಾರು ಆದೇಶದ ನೋಟಿಸ್ ನೋಡುತ್ತಿದ್ದಂತೆ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

ತೀರ್ಥಹಳ್ಳಿ ಹಾಗೂ ಮಾಳೂರು ಠಾಣೆ ವ್ಯಾಪ್ತಿಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ತೀರ್ಥಹಳ್ಳಿ ನಿವಾಸಿ ಸುಹೇಲ್‌ನನ್ನು 2 ವರ್ಷಗಳ ಕಾಲ ಗಡಿಪಾರು ಮಾಡಲು ಪೊಲೀಸ್ (Police) ಇಲಾಖೆ ಆದೇಶಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕನನ್ನು ಸೋಲಿಸಲು ಹರಕೆ- ಮೊಣಕಾಲಿನಲ್ಲೇ ತಿರುಪತಿ ಬೆಟ್ಟ ಹತ್ತಿದ BJP ಮುಖಂಡ

ಗಡಿಪಾರು ಆದೇಶದ ನೋಟಿಸ್ ನೋಡಿದ ಆರೋಪಿ- ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಗಡಿಪಾರು ಆದೇಶದ‌ ನೋಟಿಸ್ ಹಿಡಿದುಕೊಂಡು ಪೊಲೀಸರು ಮನೆಯ ಬಳಿ ತೆರಳಿದ್ದರು. ನೋಟಿಸ್ ಸ್ವೀಕರಿಸಿದ ಆರೋಪಿ ಗಡಿಪಾರು ಭಯದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಆರೋಪಿಗೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಕೊಡಿಸಿದ್ದಾರೆ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇದನ್ನೂ ಓದಿ:  ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆ‌ ಹೊರಟ ಬೀದಿನಾಯಿ

Live Tv

Leave a Reply

Your email address will not be published. Required fields are marked *

Back to top button