ಗಾಂಧೀನಗರ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಅವರಿಂದು (ಅ.22) ಭೇಟಿ ನೀಡಿದ್ದು, ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ (Mukesh Ambani) ಹಾಗೂ ಅನಂತ್ ಅಂಬಾನಿ (Anant Ambani) ಅವರೊಂದಿಗೆ ಮಾತುಕತೆ ನಡೆಸಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಅಮೆರಿಕದ ರಾಯಭಾರಿ ಸೆರ್ಗಿಯೊ ಗೊರ್, ಪತ್ನಿ ಜಾನೆಟ್ ಡೌಸ್ಡೆಬೆಸ್ ರೂಬಿಯೊ ಅವರೊಂದಿಗೆ ಗುಜರಾತ್ನ ಜಾಮ್ನಗರದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ನ ಬೃಹತ್ ಸಂಕೀರ್ಣಕ್ಕೆ ಭೇಟಿ ನೀಡಿದರು. ಈ ವೇಳೆ ಮುಖೇಶ್ ಅಂಬಾನಿ ಕುಟುಂಬವು ಅಮೆರಿಕ ನಿಯೋಗವನ್ನು ಸ್ವಾಗತಿಸಿತು. ಇದನ್ನೂ ಓದಿ: ನಂದಿಧ್ವಜ ಪೂಜೆ ವೇಳೆ ಯಡವಟ್ಟು; ಸಿಎಂ ಜೊತೆ ಸಚಿವರನ್ನ ಪೂಜೆಗೆ ಬಿಡದೆ ಅಡ್ಡಗಟ್ಟಿದ ಎಸ್ಪಿ
ಈ ವೇಳೆ ಮುಖೇಶ್ ಅಂಬಾನಿ ಹಾಗೂ ಅನಂತ್ ಅಂಬಾನಿ ಅವರೊಂದಿಗೆ ಮಾತುಕತೆ ನಡೆಸಿ, ಇಂಧನ ಭದ್ರತೆ, ಹೊಸ ಇಂಧನ ಯೋಜನೆಗಳು ಮತ್ತು ಭಾರತ-ಅಮೆರಿಕ ವಾಣಿಜ್ಯ ಸಂಬಂಧಗಳನ್ನು ಬಲಪಡಿಸುವ ಅವಕಾಶಗಳ ಮೇಲೆ ಗಮನ ಕೇಂದ್ರಿಕರಿಸಿದ್ದಾರೆ.
ಜಾಮ್ನಗರದಲ್ಲಿದ್ದ ಸಮಯದಲ್ಲಿ ಮಾರ್ಕೊ ರೂಬಿಯೊ ಅವರು ವಿಶ್ವದ ಅತಿ ದೊಡ್ಡ ಏಕೈಕ ಸ್ಥಳದಲ್ಲಿರುವ ತೈಲ ಶುದ್ಧೀಕರಣ ಸಂಕೀರ್ಣ, ವಂತಾರಾ ವನ್ಯಜೀವಿ ರಕ್ಷಣಾ ಮತ್ತು ಸಂರಕ್ಷಣಾ ಕೇಂದ್ರ ಹಾಗೂ ರಿಲಯನ್ಸ್ ಸಂಸ್ಥೆಯ ಉದಯೋನ್ಮುಖ ಹಸಿರು ಇಂಧನ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿ, ವೀಕ್ಷಿಸಿದರು. ಇದನ್ನೂ ಓದಿ: ಬೆಳಗಾವಿ | ಹಬ್ಬದ ದಿನವೇ ಹೆಂಡತಿಗೆ ಚಟ್ಟ ಕಟ್ಟಿದ ಪತಿ
