ಯುವತಿ ಮೇಲೆ ಫೈರಿಂಗ್ ಪ್ರಕರಣ – ಪಾಗಲ್ ಪ್ರೇಮಿ ವಿರುದ್ಧ ಎಫ್‍ಐಆರ್

Public TV
1 Min Read
Marathalli Shoot copy

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಯುವತಿ ಮೇಲೆ ಫೈರಿಂಗ್ ಮಾಡಿದ್ದ ಪಾಗಲ್ ಪ್ರೇಮಿ ಅಮರೇಂದ್ರ ಪಟ್ನಾಯಕ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಫೆಬ್ರವರಿ 25 ರಂದು ಯುವತಿ ಶುಭಾಶ್ರೀ ವಾಸವಿದ್ದ ಪಿಜಿ ಬಳಿ ಹೋಗಿದ್ದ ಅಮರೇಂದ್ರ ಪಟ್ನಾಯಕ್, ಶುಭಾಶ್ರೀ ಮೇಲೆ ಪಿಸ್ತೂಲ್ ಬಳಸಿ ಫೈರಿಂಗ್ ಮಾಡಿದ್ದನು. ಯುವತಿಯ ಹೊಟ್ಟೆ ಭಾಗಕ್ಕೆ ಫೈರ್ ಮಾಡಿದ ಆರೋಪಿ ತಾನು ಕೂಡ ಕೈ ಮತ್ತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇಬ್ಬರ ಪರಿಸ್ಥಿತಿ ಕೂಡ ಗಂಭೀರವಾಗಿದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಇದನ್ನೂ ಓದಿ: ಮಾರತ್‍ಹಳ್ಳಿ ಶೂಟೌಟ್- 17 ಪುಟಗಳಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟ ಲವ್ ಸ್ಟೋರಿ

Marathalli Shoot 3.jpg

ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಶುಭಾಶ್ರೀ ಹೇಳಿಕೆ ಪಡೆದಿದ್ದಾರೆ. ಅಮರೇಂದ್ರ ಪಟ್ನಾಯಕ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದರಿಂದ ಬೇಸತ್ತು ಹೈದರಾಬಾದ್‍ನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದೆ. ಬೆಂಗಳೂರಿಗೆ ಬಂದ ನಂತರ ಅಮರೇಂದ್ರ ಪಟ್ನಾಯಕ್ ಕೂಡ ಬೆಂಗಳೂರಿಗೆ ಬಂದಿದ್ದ. ಇಲ್ಲೂ ಕೂಡ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದನ್ನೂ ಓದಿ: ಹೈದರಾಬಾದ್‍ನಿಂದ ಬಂದು ಪ್ರೇಯಸಿಗೆ ಗುಂಡಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

Love Case

ಕಳೆದ 25 ರಂದು ಮಾರತ್ತಹಳ್ಳಿಯ ಪಿಜಿ ಬಳಿ ಬಂದು ಕೊನೆ ಬಾರಿಗೆ ಮಾತಾಡಬೇಕು ಎಂದು ಕರೆಸಿದ್ದನು. ಈ ವೇಳೆ ಏಕಾಏಕಿ ಪಿಸ್ತೂಲ್‍ನಿಂದ ಹೊಟ್ಟೆಯ ಭಾಗಕ್ಕೆ ಫೈರ್ ಮಾಡಿ ಎಸ್ಕೇಪ್ ಆಗಿದ್ದಾನೆ ಎಂದು ಶುಭಾಶ್ರೀ ಹೇಳಿಕೆ ಕೊಟ್ಟಿದ್ದಾಳೆ. ಈ ಹೇಳಿಕೆ ಆಧಾರದ ಮೇಲೆ ಐಪಿಸಿ ಸೆಕ್ಷನ್ ಹಾಗೂ ಇಂಡಿಯನ್ ಆರ್ಮ್ಸ್ ಆಕ್ಟ್ ಅಡಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *