ರಾಯಚೂರು: ಶಾಸಕ, ಸಂಸದರಿಗೆ ಸಂಬಳ ಇದೆ ಎನ್ನುವುದೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ದೊಡ್ಡ ವ್ಯೂಹ ಮಾಡಿಕೊಂಡು ಪ್ರಚಾರ ಮಾಡುವವರೇ ಚುನಾವಣೆ ನಿಲ್ಲಬೇಕು ಎನ್ನುವ ಪರಿಸ್ಥಿತಿಯಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಮುಖ್ಯಸ್ಥ ನಟ ಉಪೇಂದ್ರ ಬೇಸರ ವ್ಯಕ್ತಪಡಿಸಿದರು.
ರಾಯಚೂರಿನಲ್ಲಿ ಮಾತನಾಡಿದ ನಟ ಉಪೇಂದ್ರ, ಎಲ್ಲರ ಜೊತೆ ನಾನು ಭ್ರಷ್ಟನಾಗಿರಬೇಕಾ? ಬೇಡ ಎನ್ನುವುದು ನನ್ನ ಉದ್ದೇಶ. ಹಾಗಾಗಿ ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ಜನರ ಮುಂದೆ ಬಂದಿದ್ದೇನೆ. ಬಳ್ಳಾರಿಯಲ್ಲಿ ಅರ್ಹ ಅಭ್ಯರ್ಥಿ ಸಿಗಲಿಲ್ಲ. ಹಾಗಾಗಿ ಇಲ್ಲಿ ಮಾತ್ರ ಅಭ್ಯರ್ಥಿ ಹಾಕಿಲ್ಲ ಎಂದು ಹೇಳಿದರು.
Advertisement
Advertisement
ಯಾವುದು ಸುದ್ದಿಯಲ್ಲಿದೆಯೋ ಅದೇ ಸುದ್ದಿಯಾಗುತ್ತಿದೆ. ಮಂಡ್ಯ ಕೂಡ ಒಂದು ಕ್ಷೇತ್ರ ಅಲ್ಲಿ ಪ್ರಯತ್ನ ಪಡುತ್ತಿದ್ದಾರೆ. ನಮಗೆ 28 ಕ್ಷೇತ್ರ ಇದೆ. ಮಂಡ್ಯದಲ್ಲೂ ಕೂಡ ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡುತ್ತಿದ್ದಾರೆ. ಯಾರ ವಿರುದ್ಧವೂ ಅಲ್ಲ, ನಾವು ಸ್ಪರ್ಧೆ ಮಾಡುತ್ತಿದ್ದೇವೆ ಅಷ್ಟೇ ಎಂದರು.
Advertisement
ನಮ್ಮದು ಸೈಲೆಂಟ್ ರೆವಲ್ಯೂಷನ್. ಅದು ಎವಲ್ಯೂಷನ್ ನಿಂದ ಆಗಬೇಕು. ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ನಿರಂಜನ್ ನಾಯಕ್ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಉಪೇಂದ್ರ ಹೇಳಿದರು.