ಸ್ಯಾಂಡಲ್‌ವುಡ್ (Sandalwoo) `ಟಗರು’ ಬ್ಯೂಟಿ ಮಾನ್ವಿತಾ ಕಾಮತ್ (Manvitha Kamath), ಸಿನಿಮಾ ನ್ಯೂಸ್ ಜೊತೆ ಒಂದಲ್ಲಾ ಒಂದು ವಿಷ್ಯವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಕುತ್ತಿಗೆಗೆ ಕಾಜಲ್ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.
View this post on Instagram
ಕೆಂಡಸಂಪಿಗೆ, ಟಗರು (Tagaru) ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿರುವ ಮಾನ್ವಿತಾ ಭಿನ್ನವಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಸದಾ ಹೊಸ ಬಗೆಯ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಹೈಲೈಟ್ ಆಗುವ ನಟಿ, ಈಗ ನಾರ್ಮಲ್ ಟ್ಯಾಟೂ ಬದಲು ಕಾಜಲ್ ಟ್ಯಾಟೂ ಹಾಕಿಸಿಕೊಂಡು ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.
View this post on Instagram
ನಟಿ ಮಾನ್ವಿತಾ ಅವರ ಕುತ್ತಿಗೆಯ ಮೇಲೆ ಅ, ಆ, ಇ, ಈ ಅಂತಾ ಕಾಜಲ್‌ನಲ್ಲಿ ಬರೆಯಲಾಗಿದೆ. ಐಲೈನರ್ ಬ್ರಶ್‌ನಿಂದ ಅಕ್ಷರಮಾಲೆಯನ್ನ ಬರೆಸಿರುವುದು ಇದೀಗ ಅನೇಕರ ಮನಗೆದ್ದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ದಿವ್ಯಾ- ಅರವಿಂದ್ ಮದುವೆ ಆದರೆ ಡಿವೋರ್ಸ್ ಗ್ಯಾರಂಟಿ: ಆರ್ಯವರ್ಧನ್
ಇನ್ನೂ ಮಾನ್ವಿತಾ ಅವರಿಗೆ ಸವಾಲಿನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಇಷ್ಟ. `ಶಿವ 143′ ನಂತರ ಮತ್ತೆ ಹೊಸ ಬಗೆಯ ಕಥೆಗಳನ್ನ ಕೇಳುತ್ತಿದ್ದಾರೆ. ಸೂಕ್ತ ಕಥೆಯ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.