ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ (Raichur) ಸೆಪ್ಟೆಂಬರ್ ತಿಂಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. 22 ದಿನಗಳ ಅವಧಿಯಲ್ಲಿ ಬರೋಬ್ಬರಿ 3 ಕೋಟಿ 4 ಲಕ್ಷ 37,906 ರೂ. ಕಾಣಿಕೆ ಸಂಗ್ರಹವಾಗಿದೆ.
ಪ್ರತಿ ತಿಂಗಳಿನಂತೆ ಈ ಬಾರಿಯೂ ಮಂತ್ರಾಲಯಕ್ಕೆ ಭಕ್ತರ ದಂಡು ಹರಿದು ಬಂದಿದ್ದು, ರಾಯರ ದರ್ಶನ ಪಡೆದ ಭಕ್ತರು ಹುಂಡಿಗೆ ಭಾರೀ ಪ್ರಮಾಣದಲ್ಲಿ ಕಾಣಿಕೆ ಹಾಕಿದ್ದಾರೆ.
ಒಟ್ಟು ಸಂಗ್ರಹವಾದ ಕಾಣಿಕೆಯಲ್ಲಿ 2 ಕೋಟಿ 96 ಲಕ್ಷ 7,906 ರೂ. ನಗದು ರೂಪದಲ್ಲಿ ಬಂದಿದೆ. ಇನ್ನು 8 ಲಕ್ಷ 30 ಸಾವಿರ ಮೌಲ್ಯದ ನಾಣ್ಯಗಳು ಸಂಗ್ರಹವಾಗಿವೆ. ಇದರ ಜೊತೆಗೆ ಭಕ್ತರು ಕಾಣಿಕೆ ರೂಪದಲ್ಲಿ 48 ಗ್ರಾಂ ಚಿನ್ನ ಹಾಗೂ 285 ಗ್ರಾಂ ಬೆಳ್ಳಿ ಸಮರ್ಪಿಸಿದ್ದಾರೆ.
ಮಂತ್ರಾಲಯ ರಾಯರ ಮಠದಲ್ಲಿ ಬಿಗಿ ಭದ್ರತೆಯ ನಡುವೆ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಸದಸ್ಯರು ಹಾಗೂ ಕರಸೇವಕರು ಭಾಗವಹಿಸಿದ್ದರು. ಇದನ್ನೂ ಓದಿ: KSRTC ಬಸ್, ಲಾರಿ ಮಧ್ಯೆ ಭೀಕರ ಅಪಘಾತ – ಬಸ್ ಚಾಲಕ ದುರ್ಮರಣ, ಹಲವರಿಗೆ ಗಾಯ
ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಶ್ರೀಮಠದ ಅಧಿಕಾರಿಗಳು ಹುಂಡಿ ಎಣಿಕೆ ವೇಳೆ ಸ್ಥಳದಲ್ಲೇ ಹಾಜರಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದರು.ಇದನ್ನೂ ಓದಿ: ಸ್ನೇಹಿತನ ಜೊತೆ ಲಾಡ್ಜ್‌ಗೆ ತೆರಳಿದ್ದ ಮಹಿಳೆಯ ರೇಪ್‌ಗೆ ಸುಪಾರಿ ಕೊಟ್ಟ ಪತ್ನಿ!

