– 9 ಲಕ್ಷ ರೂ. ವೆಚ್ಚದ ಮನೆ ನಿರ್ಮಿಸಿಕೊಟ್ಟ ಶಾಸಕ
ಮಡಿಕೇರಿ: ಅಲ್ಲೊಂದು.. ಇಲ್ಲೊಂದು.. ಮನೆ ಇರೋ ಊರಿದು. ಹಸಿರಿನ ಹೊದಿಕೆ ಹೊದ್ದಿಕೊಂಡಿರುವ ಪುಟ್ಟ ಊರು. ಆದ್ರೆ ಇಂತಹ ಊರಲ್ಲಿ ಕಳೆದ ವರ್ಷ ಘನಘೋರ ಕೃತ್ಯವೊಂದು ನಡೆದುಹೋಗಿತ್ತು. ಬಾಳಿ ಬದುಕಬೇಕಿದ್ದ ಬಾಲಕಿಯೊಬ್ಬಳ ರುಂಡವನ್ನೇ ಅದೊಬ್ಬ ಪಾಪಿ ಕತ್ತರಿಸಿದ್ದ. ಊರಿಗೆ ಊರೇ ಈ ಕೃತ್ಯ ಕಂಡು ಬೆಚ್ಚಿ ಬಿದ್ದಿತ್ತು. ಈ ಕುರಿತ ವರದಿಯನ್ನ ನಿಮ್ಮ ʻಪಬ್ಲಿಕ್ ಟಿವಿʼ (PUBLiC TV) ಪ್ರಸಾರ ಮಾಡಿತ್ತು. ಅಲ್ಲದೇ ಬಾಲಕಿ (Girl) ಕುಟುಂಬಕ್ಕೆ ನ್ಯಾಯ.. ನೆರವು ಕೊಡಿಸುವಂತೆಯೂ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿತ್ತು. ಅದರಂತೆ ಪಬ್ಲಿಕ್ ಟಿವಿ ಕರೆಗೆ ಕಿವಿಗೊಟ್ಟ ಶಾಸಕ ಮಂತರ್ ಗೌಡ ಅವರಿಂದು ಬಾಲಕಿ ಕುಟುಂಬಸ್ಥರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಹೌದು. ನಿಮ್ಮಗೆಲ್ಲ ನೆನಪಿರಬೇಕು ಸೋಮವಾರಪೇಟೆ ತಾಲೂಕಿನ ಕುಂಬಾರಗಡಿ ಗ್ರಾಮದ ಬಾಲಕಿಯೊಬ್ಬಳು ಕಳೆದ ವರ್ಷ 10ನೇ ತರಗತಿಯಲ್ಲಿ ಪಾಸ್ ಆಗಿ ಈ ಸಂಭ್ರಮವನ್ನ ಪೋಷಕರೊಂದಿಗೆ ಹಂಚಿಕೊಳ್ಳಲು ಓಡೋಡಿ ಬರ್ತಿದ್ದಳು. ಇದೇ ಸಮಯದಲ್ಲೇ ಪಾಗಲ್ ಪ್ರೇಮಿಯೊಬ್ಬ (Lover) ಆಕೆ ತನಗೆ ಸಿಕ್ಕಲ್ಲ ಅಂತ ಭಾವಿಸಿ ಬಾಲಕಿಯ ರುಂಡವನ್ನೇ ಕತ್ತರಿಸಿಕೊಂಡು ದಟ್ಟ ಅರಣ್ಯಕ್ಕೆ ತೆರಳಿದ್ದ. ನಂತರ ಪೊಲೀಸರು ಮರದ ಮೇಲೆ ಇಟ್ಟಿದ ಬಾಲಕಿ ರುಂಡವನ್ನು ಹುಡುಕಿ ನಂತರ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ರು. ಆದರೆ ಬಾಲಕಿಯ ಕುಟುಂಬ ಮಾತ್ರ ಕಡುಬಡತನದಲ್ಲಿತ್ತು. ಗುಡಿಸಲಿನಲ್ಲಿ ವಾಸ ಮಾಡುವ ಬಾಲಕಿಯ ಕುಟುಂಬದ ಸಂಕಷ್ಟದ ಪರಿಸ್ಥಿತಿ ಬಗ್ಗೆ ನಿಮ್ಮ ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: ನೀರಿನ ಬಾಟಲ್ ಸೇರಿದಂತೆ ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ಬ್ಯಾನ್
ಅಷ್ಟೇ ಅಲ್ಲದೇ ಸ್ಥಳೀಯ ಶಾಸಕರಿಗೆ ಆ ಕುಟುಂಬಕ್ಕೆ ಶಾಶ್ವತ ಸೂರು ಕಲ್ಪಿಸಿಕೋಡುವಂತೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ ಶಾಸಕ ಮಂತರ್‌ಗೌಡ (Mantar Gowda) ಅವರು ಕಳೆದ ಬಾರಿ ಆ ಬಾಲಕಿ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಮುಂದಿನ ವರ್ಷದಲ್ಲೇ ತಮ್ಮ ಕುಟುಂಬಕ್ಕೆ ಒಂದು ಸೂರು ಕಲ್ಪಿಸುತ್ತೇನೆ ಎಂದು ಭರವಸೆ ಸಹ ನೀಡಿದ್ರು. ಅದರಂತೆ ಬಾಲಕಿ ಸತ್ತು 1 ವರ್ಷ ಕಳೆಯುತ್ತಿದ್ದಂತೆ ಬಾಲಕಿ ಮೀನಾಳ ಕುಟುಂಬಕ್ಕೆ ಹೊಸ ಮನೆಯೊಂದನ್ನ ಕಟ್ಟಿ ಇಂದು (ಜೂ.9) ಬಾಲಕಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಈ ಕೆಲಸಕ್ಕೆ ತನ್ನೊಂದಿಗೆ ಕೈಜೋಡಿಸಿದ್ದಕ್ಕೂ ಶಾಸಕ ಮಂತರ್ ಗೌಡ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್ ಬಗ್ಗೆ ಬಿಚ್ಚಿಟ್ಟ ಅತ್ತೆ
ಇನ್ನೂ ಶಾಸಕ ಮಂತರ್ ಗೌಡ ಮನೆ ಹಸ್ತಾಂತರ ಮಾಡುವ ವೇಳೆ ಮೃತ ಬಾಲಕಿಯ ತಂದೆ-ತಾಯಿ ಹಾಗೂ ಕುಟುಂಬಸ್ಥರ ಮೋಗದಲ್ಲಿ ಬಾಲಕಿ ಮೀನಾಳ ನೆನಪು ಮಾಡಿಕೊಂಡು ನಗುಮುಖದಲ್ಲೇ ಮನೆಯ ಒಳಗೆ ಪ್ರವೇಶ ಮಾಡಿದ್ರು. ತನ್ನ ಮಗಳ ಸಾವಿಗೆ ಕಾರಣರಾದ ಅರೋಪಿಗೆ ಶಿಕ್ಷೆ ಅಯ್ತು. ಆದರು ಮಗಳ ನೆನಪು ಪದೇ ಪದೇ ಕಾಡುತ್ತಿದೆ. ಅಷ್ಟೇ ಅಲ್ಲದೇ ಇಂತಹ ಶಾಶ್ವತವಾದ ಸೂರು ಕಲ್ಪಿಸುವುದಕ್ಕೆ ಒಂದು ರೀತಿಯಲ್ಲಿ ʻಪಬ್ಲಿಕ್ ಟಿವಿʼಯೇ ಕಾರಣ. ಮಗಳ ನೆನಪಿನಲ್ಲೇ ನಾವು ಜೀವನ ಕಳೆಯುತ್ತೇವೆ ಎಂದು ಭಾವುಕರಾದರಲ್ಲದೇ ಶಾಸಕ ಮಂತರ್‌ಗೌಡ ಅವರಿಗೂ ಕೃತಜ್ಞತೆ ಅರ್ಪಿಸಿದ್ದಾರೆ. ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್ ಕಿಲ್ಲರ್ಸ್.. ಫೋನ್‌ಕಾಲ್‌ನಲ್ಲೇ ಪಿನ್ ಟು ಪಿನ್ ಅಪ್ಡೇಟ್ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ