– ಐವರ ಬಂಧನ
ಜೈಪುರ: ವಿವಾಹಿತೆ ಜೊತೆ ಪರಾರಿಯಾಗಿದ್ದಕ್ಕೆ ವ್ಯಕ್ತಿಯೊಬ್ಬನ ಮೂಗ (Nose Cut) ನ್ನೇ ಕತ್ತರಿಸಿದ ಪ್ರಕರಣ ಸಂಬಂಧ ಇದೀಗ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ನಾಗ್ಪುರ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಗಳ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗಿದೆ.
ಪರ್ಬಾಸ್ತಾರ್ ನಿವಾಸಿ ಹಮೀದ್ ಜನವರಿ ತಿಂಗಳಲ್ಲಿ ವಿವಾಹಿತೆ ಜೊತೆ ಪರಾರಿಯಾಗಿ ಅಜ್ಮೀರ್ನಲ್ಲಿ ವಾಸವಾಗಿದ್ದ. ಈ ವಿಚಾರ ತಿಳಿದ ಮಹಿಳೆಯ ಕಡೆಯವರು, ಅಜ್ಮೀರ್ ಗೆ ತೆರಳಿ ಹಮೀದ್ನನ್ನು ಅಪಹರಿಸಿ ಕೃಷಿಗೆ ಬಳಸುವ ಮೆಶಿನ್ನಿಂದ ಮೂಗನ್ನು ಕತ್ತರಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ 6 ವರ್ಷವಿದ್ದು ಮಗು ಮಾಡಿಕೊಂಡಿದ್ದ ಮಹಿಳೆ – ವಿಷಯ ತಿಳಿಯುತ್ತಲೇ ಪತಿಯಿಂದ ಪತ್ನಿ ಕೊಲೆ
ಈ ಸಂಬಂಧ ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳು ಮೊದಲು ನನಗೆ ಕೋಲು ಹಾಗೂ ಕಬ್ಬಿಣದ ರಾಡ್ನಿಂದ ಮನಬಂದಂತೆ ಥಳಿಸಿದ್ದಾರೆ. ನಂತರ ಹತ್ತಿರದ ಕೆರೆಯ ಬಳಿ ಕರೆದೊಯ್ದು ಮೂಗು ಕತ್ತರಿಸಿದ್ದಾರೆ. ಅಲ್ಲದೆ ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಮಹಿಳೆಯ ಸಹೋದರ ಹಾಗೂ ಆತನ ಸಂಬಂಧಿಕರು ನನ್ನ ಅಪಹರಿಸಿ ನಾಗ್ಪುರ ಜಿಲ್ಲೆಗೆ ಕರೆದೊಯ್ದು ಮೂಗು ಕತ್ತರಿಸಿರುವುದಾಗಿ ಸಂತ್ರಸ್ತ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಇತ್ತ ಸಾಮಾಜಿಕ ಜಾಲತಾಣದಲ್ಲಿ ಕೃತ್ಯದ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಅಜ್ಮೀರ್ನ ಗೊಗ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.