ಚಂಡೀಗಢ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಯುವಕನೊಬ್ಬನಿಗೆ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗೂಸಾ ಕೊಟ್ಟಿದ್ದಾರೆ.
ಹರ್ಯಾಣದ 10 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಗಳಿದೆ. ಹೀಗಾಗಿ ಕರ್ನಾಲ್‍ನಲ್ಲಿ ಇಂದು ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಭಿನಂದನ ಕಾರ್ಯಕ್ರಮ ಆಯೋಜಿಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಯುವಕನೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.
Advertisement
ಬಿಜೆಪಿ ಕಾರ್ಯಕರ್ತನೊಬ್ಬ ಮನೋಹರ್ ಲಾಲ್ ಖಟ್ಟರ್ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಾನೆ. ಬಳಿಕ ಅವರ ಜೊತೆಗೆ ಸೆಲ್ಫಿ ಫೋಟೋ ತೆಗೆದುಕೊಳ್ಳುವ ಸಲುವಾಗಿ ಮೊಬೈಲ್ ಹಿಡಿಯುತ್ತಾನೆ. ಈ ವೇಳೆ ಏಕಾಏಕಿ ಕೋಪಗೊಂಡ ಸಿಎಂ ಯುವಕನ ಕೈಗೆ ಹೊಡೆದು, ಹಿಂದಕ್ಕೆ ತಳ್ಳುತ್ತಾರೆ. ಮನೋಹರ್ ಲಾಲ್ ಖಟ್ಟರ್ ಅವರ ವರ್ತನೆಯಿಂದ ಮುಜುಗುರಕ್ಕೆ ಒಳಗಾದ ಯುವಕ ಕಾರ್ಯಕ್ರಮದಿಂದ ಹೊರ ನಡೆದಿದ್ದಾನೆ.
Advertisement
#WATCH Haryana CM Manohar Lal Khattar pushes aside a man who tries to take a selfie with him, at an event in Karnal. pic.twitter.com/HZK10VWWQy
— ANI (@ANI) June 6, 2019
Advertisement
ಈ ದೃಶ್ಯವನ್ನು ಸ್ಥಳದಲ್ಲಿದ್ದ ಸುದ್ದಿಗಾರರು ಹಾಗೂ ಸ್ಥಳೀಯರು ವಿಡಿಯೋ ಕ್ಯಾಮೆರಾ, ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
ಮನೋಹರ್ ಲಾಲ್ ಖಟ್ಟರ್ ಅವರು, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ, ಸುಳ್ಳು ದೂರುಗಳು ಹೆಚ್ಚುತ್ತಿವೆ ಎಂಬ ವಿವಾದತ್ಮಕ ಹೇಳಿಕೆ ನೀಡಿ, ರಾಜ್ಯದ ಹಾಗೂ ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಪಂಚಕುಲ ಜಿಲ್ಲೆಯ ಕಾಲ್ಕಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಮಾಡಿದ್ದ ಅವರು, ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳನ್ನು ಮಹಿಳೆಯರು ಪರಿಚಿತರ ವಿರುದ್ಧ ದಾಖಲಿಸುತ್ತಾರೆ. ಅದರಲ್ಲೂ ಸುಳ್ಳು ಆರೋಪಗಳೇ ಹೆಚ್ಚಾಗಿರುತ್ತದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ. ಆದರೇ ಹಿಂದೆ ಎಂದೋ ನಡೆದ ಘಟನೆಗಳು ಹಾಗೂ ಇಂದು ನಡೆಯುತ್ತಿರುವ ಘಟನೆಗಳನ್ನು ಮುಂದಿಟ್ಟುಕೊಂಡು ಬೇಕಂತಲೇ ಸುಳ್ಳು ಅತ್ಯಾಚಾರ ಕೇಸ್‍ಗಳನ್ನು ಕೆಲವರು ದಾಖಲಿಸುತ್ತಾರೆ. ಆದ್ದರಿಂದ ಇಂತಹ ಘಟನೆಗಳಿಗೆ ಸಂಬಂಧಪಟ್ಟ ದೂರುಗಳು ಹೆಚ್ಚಾಗುತ್ತಿದೆಯೇ ಹೊರತು ಪ್ರಕರಣಗಳಲ್ಲ ಎಂದು ಹೇಳಿಕೆ ನೀಡಿದ್ದರು.