ನವದೆಹಲಿ: ನೀರನ್ನು ಮಿತವಾಗಿ ಬಳಸುವ ಜೊತೆಗೆ ಅದನ್ನು ಉಳಿಸಲು ಮತ್ತು ಸಾಧ್ಯವಾದಲ್ಲೆಲ್ಲಾ ನೀರನ್ನು ಮರುಬಳಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.
ಮನ್ ಕಿ ಬಾತ್‍ನ 87ನೇ ಕಂತಿನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ನೀರಿನ ಮರುಬಳಕೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಮನೆಯಲ್ಲಿ ಬಳಸುವ ನೀರನ್ನು ತೋಟಕ್ಕೆ ಬಳಸುವ ಮೂಲಕ ಮರುಬಳಕೆ ಮಾಡಬಹುದಾಗಿದೆ ಎಂದರು.
ನೀರನ್ನು ಉಳಿಸುವ ಈ ಕಾರ್ಯದಲ್ಲಿ ಮಕ್ಕಳು ಹೆಚ್ಚು ಕೈಜೋಡಿಸಬೇಕು. ಜಲ ಸಂರಕ್ಷಣೆನ್ನೆ ತಮ್ಮ ಜೀವನ ಧ್ಯೇಯವನ್ನಾಗಿ ಮಾಡಿಕೊಂಡಿರುವವರು ನಮ್ಮ ದೇಶದಲ್ಲಿ ಹಲವಾರು ಜನರಿದ್ದಾರೆ ಎಂದರು.
ನದಿ ಹಾಗೂ ಕೆರೆಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ನಡೆಸುತ್ತಿರುವ ಚೆನ್ನೈನ ಅರುಣ್ ಕೃಷ್ಣಮೂರ್ತಿ ಅವರನ್ನು ಎಂದು ಪ್ರಶಂಸಿದರು. ಕೃಷ್ಣಮೂರ್ತಿ ಅವರು 150ಕ್ಕೂ ಹೆಚ್ಚು ಕೆರೆಗಳನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ಸನ್ನು ಪಡೆದಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿ, ಮೋದಿ, ಯೋಗಿಯನ್ನು ಮುಸ್ಲಿಮರು ಪ್ರೀತಿಸುತ್ತಾರೆ: ದ್ಯಾನಿಶ್ ಅಜಾದ್ ಅನ್ಸಾರಿ
ಮಹಾರಾಷ್ಟ್ರದ ರೋಹನ್ ಕಾಳೆ, ತಮಿಳುನಾಡಿನ ಮುಪ್ಪಟಂ ನಾರಾಯಣ ಅವರ ಉದಾಹರಣೆಯನ್ನು ತೆಗೆದುಕೊಂಡರು. ಜೊತೆಗೆ ನೀರಿನ ಕೊರತೆಯಿರುವ ಗುಜರಾತ್‍ನಲ್ಲಿ ಜಲಮಂದಿರ್ ಯೋಜನೆ ಪ್ರಮುಖ ಪಾತ್ರ ವಹಿಸಿದ್ದು, ನೀರು ಸಾಕಷ್ಟು ಮಟ್ಟದಲ್ಲಿ ಹೆಚ್ಚಲು ಕಾರಣವಾಗಿದೆ. ಸ್ಥಳೀಯ ಮಟ್ಟದಲ್ಲಿ ಎಲ್ಲರೂ ಇದೇ ರೀತಿ ಜಾಗೃತರಾದರೇ ಅಭಿಯಾನವನ್ನೇ ಪ್ರಾರಂಭಿಸಬಹುದು ಎಂದು ತಿಳಿಸಿದರು.
ನೀರನ್ನು ಉಳಿಸಲು ಚೆಕ್ ಡ್ಯಾಂ ನಿರ್ಮಾಣ ಅಥವಾ ಮಳೆನೀರು, ಕೊಯ್ಲಿನಂತಹ ಪ್ರಯತ್ನಗಳು ಪ್ರಾಮುಖ್ಯತೆಯನ್ನು ಹೊಂದಿದೆ. ಇದರ ಜೊತೆಗೆ ಎಲ್ಲರೂ ಒಗ್ಗೂಡಿ ಪ್ರಯತ್ನಿಸುವುದು ಹಾಗೂ ವೈಯಕ್ತಿಕ ಪ್ರಯತ್ನಗಳು ಸಹ ಮುಖ್ಯವಾಗಿದೆ ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಮೆಹಬೂಬಾ ಮುಫ್ತಿ ಏನೇ ಹೇಳುತ್ತಿದ್ದರೂ ಅದಕ್ಕೆಲ್ಲಾ ಬಿಜೆಪಿಯೇ ಹೊಣೆ: ಸಂಜಯ್ ರಾವತ್