– ಗುಜರಾತ್‌ನ ಗಿರ್‌ನಲ್ಲಿ ಸಿಂಹಗಳ ಸಂಖ್ಯೆ ಏರಿಕೆ – ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಸಂತಸ
ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ. ಇದು ನಮ್ಮ ದೃಢ ನಿಶ್ಚಯ, ಧೈರ್ಯ ಮತ್ತು ಪರಿವರ್ತನೆಗೊಳ್ಳುತ್ತಿರುವ ಭಾರತದ ಚಿತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಭಾನುವಾರ ಮನ್ ಕಿ ಬಾತ್‌ನ (Mann Ki Baat) 122ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ಇಂದು ಇಡೀ ರಾಷ್ಟ್ರವು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿದೆ. ಇಂದು ಪ್ರತಿಯೊಬ್ಬ ಭಾರತೀಯನ ಸಂಕಲ್ಪವು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದು. ನಮ್ಮ ಪಡೆಗಳು ಗಡಿಯಾಚೆಗಿನ ಭಯೋತ್ಪಾದಕರ ಅಡಗುತಾಣಗಳನ್ನು ನಾಶಪಡಿಸಿದೆ ಎಂದು ಸೇನೆಯ ಪರಾಕ್ರಮವನ್ನು ಕೊಂಡಾಡಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್’ ಬಳಿಕ ಬಿಗ್ ನ್ಯೂಸ್ ಕೊಟ್ರು ಮೋಕ್ಷಿತಾ ಪೈ!
ಆಪರೇಷನ್ ಸಿಂಧೂರ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ. ಇದು ನಮ್ಮ ದೃಢನಿಶ್ಚಯ, ಧೈರ್ಯ ಮತ್ತು ಪರಿವರ್ತನೆಗೊಳ್ಳುತ್ತಿರುವ ಭಾರತದ ಚಿತ್ರವಾಗಿದೆ. ಈ ಚಿತ್ರವು ಇಡೀ ದೇಶವನ್ನು ದೇಶಭಕ್ತಿಯ ಭಾವನೆಯಿಂದ ತುಂಬಿದೆ ಮತ್ತು ಅದನ್ನು ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಚಿತ್ರಿಸಿದೆ. ಆಪರೇಷನ್ ಸಿಂಧೂರ ಸಮಯದಲ್ಲಿ ನಮ್ಮ ಪಡೆಗಳು ಪ್ರದರ್ಶಿಸಿದ ಶೌರ್ಯ ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಎಂದಿದ್ದಾರೆ. ಇದನ್ನೂ ಓದಿ: ಜಪಾನ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ
ಆಪರೇಷನ್ ಸಿಂಧೂರ ಪ್ರಪಂಚದಾದ್ಯಂತ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಹೊಸ ವಿಶ್ವಾಸ ಮತ್ತು ಉತ್ಸಾಹವನ್ನು ನೀಡಿದೆ. ಆಪರೇಷನ್ ಸಿಂಧೂರ ದೇಶದ ಜನರ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ ಅನೇಕ ಕುಟುಂಬಗಳು ಆ ಹೆಸರನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಿವೆ. ಬಿಹಾರದ ಕತಿಹಾರ್, ಉತ್ತರಪ್ರದೇಶದ ಖುಷಿನಗರ ಮತ್ತು ಇತರ ಹಲವು ನಗರಗಳಲ್ಲಿ ಆ ಅವಧಿಯಲ್ಲಿ ಜನಿಸಿದ ಮಕ್ಕಳಿಗೆ `ಸಿಂಧೂರ’ ಎಂದು ಹೆಸರಿಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಮಾರ್ನಮಿ’ಗೆ ಮೋಹಕ ತಾರೆ ರಮ್ಯಾ ಸಾಥ್ – ರಿವೀಲಾಯ್ತು ಚೈತ್ರಾ ಆಚಾರ್ ರೋಲ್
ದೇಶದ ಅನೇಕ ನಗರಗಳು, ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ತಿರಂಗ ಯಾತ್ರೆಗಳನ್ನು ಆಯೋಜಿಸಿರುವುದನ್ನು ನೀವು ನೋಡಿರಬಹುದು. ಸಾವಿರಾರು ಜನರು ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ದೇಶದ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ಬಂದರು. ಅನೇಕ ನಗರಗಳಲ್ಲಿ, ನಾಗರಿಕ ರಕ್ಷಣಾ ಸ್ವಯಂಸೇವಕರಾಗಲು ಹೆಚ್ಚಿನ ಸಂಖ್ಯೆಯ ಯುವಕರು ಜಮಾಯಿಸಿದರು. ಚಂಡೀಗಢದ ವೀಡಿಯೋಗಳು ವೈರಲ್ ಆಗಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ, ಸಿಂಹಗಳಿಗೆ ಸಂಬಂಧಿಸಿದ ಒಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ಕಳೆದ 5 ವರ್ಷಗಳಲ್ಲಿ, ಗುಜರಾತ್‌ನ (Gujarat) ಗಿರ್‌ನಲ್ಲಿ ಸಿಂಹಗಳ (Lions) ಸಂಖ್ಯೆ 674ರಿಂದ 891ಕ್ಕೆ ಏರಿದೆ. ಸಿಂಹ ಗಣತಿಯ ನಂತರ ಈ ಸಿಂಹಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಪ್ರಾಣಿ ಗಣತಿಯನ್ನು ಹೇಗೆ ನಡೆಸಲಾಗುತ್ತದೆ ಎಂದು ನಿಮ್ಮಲ್ಲಿ ಹಲವರು ಆಶ್ಚರ್ಯ ಪಡುತ್ತಿರಬೇಕು. ಇದು ತುಂಬಾ ದೊಡ್ಡ ಸವಾಲಿನ ಸಂಗತಿ. ಸಿಂಹ ಗಣತಿಯನ್ನು 11 ಜಿಲ್ಲೆಗಳಲ್ಲಿ, 35 ಸಾವಿರ ಚದರ ಕಿಲೋಮೀಟರ್ ಪ್ರದೇಶದಲ್ಲಿ ನಡೆಸಲಾಗಿದೆ. ಸಿಂಹಗಳ ಗಣತಿಗಾಗಿ ತಂಡಗಳು ಈ ಪ್ರದೇಶಗಳನ್ನು 24 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿದವು. 24 ಗಂಟೆಗಳ ಕಾಲ ಸಂಪೂರ್ಣ ಅಭಿಯಾನದೊಂದಿಗೆ ಪರಿಶೀಲನೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ತೊಡೆದು ಹಾಕಲು ನಾವು ಸಿದ್ಧ: ಪಾಕ್ ವಿರುದ್ಧ ಅಮೆರಿಕದಲ್ಲಿ ಗುಡುಗಿದ ಶಶಿ ತರೂರ್
ಅಂತರರಾಷ್ಟ್ರೀಯ ಯೋಗ ದಿನ ಹತ್ತಿರ ಬರುತ್ತಿದೆ. ನೀವು ಇನ್ನೂ ಯೋಗದಿಂದ ದೂರವಿದ್ದರೆ, ಈಗಲೇ ಯೋಗಕ್ಕೆ ಸೇರಿಕೊಳ್ಳಬೇಕು. ಯೋಗವು ನಿಮ್ಮ ಜೀವನವನ್ನು ನಡೆಸುವ ವಿಧಾನವನ್ನು ಬದಲಾಯಿಸುತ್ತದೆ. ಜೂನ್ 21, 2015ರಂದು `ಯೋಗ ದಿನ’ ಪ್ರಾರಂಭವಾದಾಗಿನಿಂದ, ಅದರ ಕಡೆಗೆ ಆಕರ್ಷಣೆ ನಿರಂತರವಾಗಿ ಹೆಚ್ಚುತ್ತಿದೆ. ಹಲವಾರು ಸಂಸ್ಥೆಗಳು ಯೋಗ ದಿನಕ್ಕೆ ತಮ್ಮ ಸಿದ್ಧತೆಗಳನ್ನು ನಡೆಸುತ್ತಿವೆ. ಹಿಂದಿನ ವರ್ಷಗಳ ಯೋಗ ದಿನಾಚರಣೆಯ ಚಿತ್ರಗಳು ಬಹಳ ಸ್ಫೂರ್ತಿದಾಯಕವಾಗಿವೆ ಎಂದಿದ್ದಾರೆ.