ನವದೆಹಲಿ: ದೇಶದ ಪ್ರಧಾನಿಯಾದವರು ಸಂಯಮದಿಂದ ವರ್ತಿಸಬೇಕೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆಯನ್ನು ನೀಡಿದ್ದಾರೆ.
ಕೇಂದ್ರದ ಮಾಜಿ ಸಚಿವ ಮನೀಶ್ ತಿವಾರಿಯವರ ‘ಫೆಬಲ್ಸ್ ಆಫ್ ಫ್ರಾಕ್ಚರ್ಡ್ ಟೈಮ್ಸ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾಗಿ ಕೆಲವು ಜವಾಬ್ದಾರಿಗಳನ್ನು ಪಾಲಿಸಬೇಕು. ಅಲ್ಲದೇ ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಭೇಟಿ ನೀಡುವ ವೇಳೆ ಅವರ ವರ್ತನೆಯೇ ಬೇರೆಯದ್ದೇ ಆಗಿರುತ್ತೆ. ಆದರೆ ಬಿಜೆಪಿಯೇತರ ರಾಜ್ಯಗಳಿಗೆ ಭೇಟಿ ನೀಡುವಾಗ ಅವರ ವರ್ತನೆ ಸರಿಯಾಗಿ ಇರುವುದೇ ಇಲ್ಲ. ಆ ರಾಜ್ಯಗಳಲ್ಲಿ ದೇಶದ ನಾಯಕರಾಗಿ ಬಳಸಬಾರದ ಭಾಷೆಗಳನ್ನು ಬಳಸುತ್ತಾರೆ. ಅಲ್ಲದೇ ಭೇಟಿಯ ಸಂದರ್ಭದಲ್ಲಿ ಸಂಯಮವನ್ನು ತೋರಿಸುವುದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಬಿಜೆಪಿ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಚಿವಾಲಯದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಆದರೆ ಬಿಜೆಪಿ ಅಧಿಕಾರವಿಲ್ಲದ ರಾಜ್ಯಗಳಲ್ಲಿ ಪ್ರಧಾನಿ ಉತ್ತಮ ಬಾಂಧವ್ಯವನ್ನು ಹೊಂದಿರುವುದಿಲ್ಲ. ದೇಶದ ಪ್ರಧಾನಿಯಾದವರು ಬೇರೆಯವರಿಗೆ ಮಾದರಿಯಾಗುವ ಹಾಗೆ ನಡೆದುಕೊಳ್ಳಬೇಕು. ದೇಶದ ಪ್ರಧಾನಿಗಳ ವರ್ತನೆ ಹಾಗೂ ನಡತೆಗಳು ಮೌಲ್ಯಯುತವಾಗಿರಬೇಕು. ಅಲ್ಲದೇ ಅವುಗಳು ಕೊನೆಯವರೆಗೂ ಸ್ಥಿರವಾಗಿರಬೇಕು. ಹೀಗಾಗಿ ಮೋದಿಯವರು ಸಂಯಮದಿಂದ ವರ್ತಿಸಬೇಕೆಂದು ಸಲಹೆ ನೀಡಿದರು.
Advertisement
ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಿಗೆ ನಮ್ಮ ಸರ್ಕಾರ ತಾರತಮ್ಯ ಮಾಡಿರಲಿಲ್ಲ. ಈ ಬಗ್ಗೆ ಖುದ್ದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರನ್ನು ಬೇಕಾದರೆ ಕೇಳಿ, ಅವರೇ ನನ್ನ ಮಾತನ್ನು ಒಪ್ಪುತ್ತಾರೆಂದು ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv