ನಿನ್ನೆಯಷ್ಟೇ ಬಂಗಾಳಿ ಮಾಡೆಲ್ ಬಿದಿಶಾ ಡಿ ಮಂಜುದಾರ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಿದಿಶಾ ಅಂತ್ಯಸಂಸ್ಕಾರ ಇನ್ನೂ ಆಗಿಯೇ ಇಲ್ಲ, ಆಗಲೇ ಮತ್ತೊಬ್ಬ ಮಾಡೆಲ್ ಆತ್ಮಹತ್ಯೆ ಮಾಡಿಕೊಂಡು ಆಘಾತ ಮೂಡಿಸಿದ್ದಾರೆ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ
ಕೋಲ್ಕತ್ತಾ ಮೂಲದ ಮಂಜುಷಾ ನಿಯೋಗಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದು, ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇಂದು ಅವರ ಶವವು ಪಟುಲಿ ಪ್ರದೇಶದಲ್ಲಿರುವ ನಿವಾಸದ ಮಂಜುಷಾ ಕೊಠಡಿಯಲ್ಲಿ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್
ಈ ಸಾವಿಗೆ ಇವರ ಆಪ್ತ ಸ್ನೇಹಿತೆ ಬಿದಿಶಾ ಡಿ ಮಂಜುನಾಥ್ ಅವರ ಸಾವೇ ಕಾರಣ ಎಂದಿದ್ದಾರೆ ಮಂಜುಷಾ ಪೋಷಕರು. ಆಪ್ತ ಸ್ನೇಹಿತೆ ಬಿದಿಶಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ, ಮಂಜುಷಾ ಖಿನ್ನತೆಗೆ ಒಳಗಾಗಿದ್ದರಂತೆ. ಈ ಖಿನ್ನತೆಯೇ ಸಾವಿಗೆ ಕಾರಣವಾಗಿದೆ ಎಂದು ಮಂಜುಷಾ ತಾಯಿ ತಿಳಿಸಿದ್ದಾರೆ. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ
ನನ್ನ ಮಗಳು ಯಾವಾಗಲೂ ಬಿದಿಶಾ ಬಗ್ಗೆಯೇ ಮಾತನಾಡುತ್ತಿದ್ದಳು. ಇದ್ದರೆ ಅವಳಂತೆಯೇ ಇರಬೇಕು ಎಂದು ಹೇಳುತ್ತಿದ್ದಳು. ಇಬ್ಬರೂ ಜೀವದ ಗೆಳೆತಿಯರಂತೆ ಬದುಕುತ್ತಿದ್ದರು. ಈ ಗೆಳೆತನವೇ ನನ್ನ ಮಗಳ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ ಪೋಷಕರು.
ಮೊನ್ನೆಯಷ್ಟೇ ತಮ್ಮ ಅಪಾರ್ಟಮೆಂಟ್ ನಲ್ಲಿ ಬಿದಿಶಾ ಡಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದರು. 21 ವರ್ಷದ ಈ ನಟಿ ಕಂ ಮಾಡೆಲ್ ಸಾವಿಗೆ ಇಡೀ ಮಾಡೆಲಿಂಗ್ ಜಗತ್ತು ಕಂಬನಿ ಮಿಡಿದಿತ್ತು. ಇದೀಗ ಮತ್ತೋರ್ವ ಮಾಡೆಲ್ ಅನ್ನು ಆ ಕ್ಷೇತ್ರ ಕಳೆದುಕೊಂಡಿದೆ. ಇಪ್ಪತ್ತು ದಿನಗಳ ಅಂತರದಲ್ಲಿ ಒಟ್ಟು ಐದು ಮಾಡೆಲ್ ಗಳು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಮಾಡೆಲಿಂಗ್ ಕ್ಷೇತ್ರಕ್ಕೆ ಶಾಕ್ ನೀಡಿದ್ದಾರೆ.