ನವದೆಹಲಿ: ನಾನು ಕಾಂಗ್ರೆಸ್‌ನ ಹಿಡುವಳಿದಾರನಲ್ಲ. ಬದಲಿಗೆ ಪಾಲುದಾರ. 40 ವರ್ಷಗಳಿಂದ ಕಾಂಗ್ರೆಸ್ ಜೊತೆಯಾಗಿದ್ದೇನೆ. ಯಾರಾದರೂ ನನ್ನನ್ನು ಹೊರತಳ್ಳುವವರೆಗೆ ಪಕ್ಷವನ್ನು ತೊರೆಯುವುದಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಮನೀಶ್ ತಿವಾರಿ ಹೇಳಿಕೆ ನೀಡಿದ್ದಾರೆ.
ಒಬ್ಬ ಸಣ್ಣ ಕಾರ್ಯಕರ್ತನೂ ಕೂಡಾ ಪಕ್ಷವನ್ನು ತೊರೆದರೆ ಅದು ಕಾಂಗ್ರೆಸ್‌ಗೆ ನಷ್ಟ. ಹಿರಿಯ ನಾಯಕರು ಪಕ್ಷ ಬಿಟ್ಟರೆ ಆಗುವ ನಷ್ಟ ಬಹು ದೊಡ್ಡದು. ಹೀಗಾಗಿ ಯಾರಾದರೂ ಹೊರಗೆ ತಳ್ಳದ ಹೊರತು ನಾನು ಪಕ್ಷ ತೊರೆಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮತಕ್ಕಾಗಿ ಕಾಂಗ್ರೆಸ್, ಪಂಜಾಬ್ ಸಿಎಂ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ: ಯೋಗಿ ಆದಿತ್ಯನಾಥ್
ಪಂಜಾಬಿನ ಆನಂದಪುರ ಸಾಹಿಬ್‌ನ ಕಾಂಗ್ರೆಸ್ ಸಂಸದರಾಗಿರುವ ತಿವಾರಿ ಪಕ್ಷವನ್ನು ತೊರೆಯುತ್ತಾರೆ ಎಂಬ ಊಹಾಪೋಹದ ನಡುವೆ ಈ ಹೇಳಿಕೆ ನೀಡಿದ್ದಾರೆ. ಪಂಜಾಬ್ ಚುನಾವಣೆಗೆ ಕೆಲವೇ ದಿನಗಳಿಗೂ ಮುನ್ನ ಟ್ವೀಟ್ ಮಾಡಿದ ತಿವಾರಿ ನಾನು ಮಾತನಾಡಿದರೆ ಅದು ಯುದ್ಧ ಎಂದು ಗ್ರಹಿಸಲಾಗುತ್ತದೆ. ಸುಮ್ಮನಿದ್ದರೆ ಅಸಹಾಯಕನಾಗುತ್ತೇನೆ ಎಂದಿದ್ದರು. ಇದನ್ನೂ ಓದಿ: ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್ ಪರಿಚಯಿಸಿದ ದೆಹಲಿ ಪೊಲೀಸರು