ಮಗನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೇಳಿದ ನಟಿ ಸುಹಾಸಿನಿ

Public TV
1 Min Read
Suhasini Nandan3

ಬೆಂಗಳೂರು: ಬಹುಭಾಷ ನಟಿ ಸುಹಾಸಿನಿಯ ಮಗ ನಂದನ್ ಅವರನ್ನ ಇಟಲಿಯ ಬೆಲ್ಯುನೊ ನಗರದಲ್ಲಿ ದರೋಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಹಾಸಿನಿ ತನ್ನ ಮಗನಿಗಾಗಿ ಸಹಾಯ ಕೇಳಿದ್ದರು.

ವೆನಿಸ್ ಏರ್‍ಪೋರ್ಟ್ ಹತ್ತಿರ ಯಾರಾದರೂ ಇದ್ದರೆ ನನ್ನ ಮಗನಿಗೆ ಸಹಾಯ ಮಾಡಲು ಆಗುತ್ತಾ? ಬೆಲ್ಯುನೊ ನಗರದಲ್ಲಿ ಆತನನ್ನು ದರೋಡೆ ಮಾಡಲಾಗಿದೆ. ಮಗ ಏರ್‍ಪೋರ್ಟ್‍ಗೆ ಹೋಗಲು ಸಹಾಯ ಮಾಡಿ ಎಂದು ಟ್ವೀಟ್ ಮಾಡುತ್ತಾ ನಂದನ್‍ಯಿರುವ ಜಾಗವನ್ನು ವಿವರಿಸಿದ್ದರು. ವೆನಿಸ್ ಸ್ಟ ಮಾರ್ಕ್ ಸ್ಕ್ವೇರ್ ಪೊಲೀಸ್ ಸ್ಟೇಷನ್ ಹತ್ತಿರ ಇರುವವರು ಅವನಿಗೆ ಸಹಾಯ ಮಾಡಿ ಎಂದು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದರು.

Suhasini Nandan 2

ಸಹಾಯ ಮಾಡುವ ಬದಲು ಜನರು ಸುಹಾಸಿನಿಯವರ ಮಗನಿಗೆ ಅನಾವಶ್ಯಕವಾಗಿ ಕರೆಗಳನ್ನು ಮಾಡುತ್ತಿದ್ದರು. ಕರೆ ಮಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತಾ ವೆನಿಸ್‍ನಲ್ಲಿರುವ ಜನರು ಸಹಾಯ ಮಾಡಲು ಆಗುವುದ್ದಿಲ್ಲ ಎಂದರೆ ನಾನು ಮೊದಲು ಪೋಸ್ಟ್ ಮಾಡಿದ ನಂಬರ್‍ಗೆ ಕರೆ ಮಾಡಬೇಡಿ. ಅವನ ಮೊಬೈಲ್ ಬ್ಯಾಟರಿ ಕಡಿಮೆಯಾಗುತ್ತಿದೆ. ಹೀಗಾಗಿ ಅವನು ಎಲ್ಲರ ಕಾಂಟ್ಯಾಕ್ಟ್ ಕಳೆದುಕೊಳುತ್ತಾನೆ. ಈಗಾಗಲೇ ತೊಂದರೆಯಲ್ಲಿ ಇರುವ ವ್ಯಕ್ತಿಗೆ ಅನಾವಶ್ಯಕವಾಗಿ ಕರೆ ಮಾಡುವ ಮೂಲಕ ತೊಂದರೆ ನೀಡುವುದನ್ನು ನಿಲ್ಲಿಸಿ ಎಂದು ಮತ್ತೆ ಟ್ವೀಟ್‍ನಲ್ಲಿ ಬರೆದುಕೊಂಡಿದ್ದರು.

Suhasini Family3

ಬಹಳ ಬೇಗ ವ್ಯಕ್ತಿಯೊಬ್ಬ ನಂದನ್‍ಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ. ನಂತರ ಸಹಾಯಕ್ಕಾಗಿ ಬಂದ ಜನರಿಗೆ ಸುಹಾಸಿನಿ ಧನ್ಯವಾದ ತಿಳಿಸಿದ್ದಾರೆ. ನಮ್ಮ ಮಗ ಇಂದು ರಾತ್ರಿ ಸುರಕ್ಷಿತವಾಗಿ ಹೋಟೆಲ್ ತಲುಪಿದ್ದಾನೆ ಎಂದು ಸುಹಾಸಿನಿ ತಮ್ಮ ಕೊನೆಯ ಟ್ವೀಟ್ ಪೋಸ್ಟ್ ಮಾಡಿದ್ದರು.

 

Share This Article