ಐಸ್ ಕ್ರೀಂ, ಕುಲ್ಫೀ ಅಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಆದ್ದರಿಂದ ಸುಲಭವಾಗಿ ಮನೆಯಲ್ಲಿಯೇ ಕಡಿಮೆ ಸಾಮಾಗ್ರಿಗಳಲ್ಲಿ ಮ್ಯಾಂಗೋ ಕುಲ್ಫೀ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
1. ಮಾವಿನಹಣ್ಣು 2-3
2. ಫ್ರೆಶ್ ಕ್ರೀಮ್ – 200 ML
3. ಕನ್ ಡೆನಸ್ಡ್ ಮಿಲ್ಕ್ – 3,4 ಚಮಚ
4. ಮಿಲ್ಕ್ ಪೌಡರ್ – 5 ಚಮಚ
5. ಕುಲ್ಫೀ ಮೌಲ್ಡ್
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಮಾವಿನಹಣ್ಣಿನ ಸಿಪ್ಪೆ ತೆಗೆದು ನೀರು ಹಾಕದೆ ರುಬ್ಬಿಕೊಳ್ಳಿ.
* ಬಳಿಕ ಒಂದು ಮಿಕ್ಸಿಂಗ್ ಬೌಲ್ ಗೆ ಹಾಕಿಕೊಂಡು ಸ್ಟೀರ್ ಮಾಡುತ್ತಿರಿ.
* ಈಗ ಅದಕ್ಕೆ ಫ್ರೆಶ್ ಕ್ರೀಮ್, ಕನ್ ಡೆನಸ್ಡ್ ಮಿಲ್ಕ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ನಂತರ ಅದಕ್ಕೆ ಹಾಲಿನ ಪೌಡರ್ ಸೇರಿಸಿ ಚೆನ್ನಾಗಿ ಕಲಸಿ
* ಬಳಿಕ ಕುಲ್ಫೀ ಮೌಲ್ಡ್ ಗೆ ಮಿಶ್ರಣವನ್ನು ಸೇರಿಸಿ ಮಧ್ಯದಲ್ಲಿ ಐಸ್ ಕಡ್ಡಿ ಇಟ್ಟು 3-4 ಗಂಟೆ ಅಥವಾ ಕುಲ್ಫೀ ಗಟ್ಟಿ ಆಗುವವರೆಗೂ ಫ್ರೀಜ್ ಮಾಡಿ.
* ಫ್ರೀಜರ್ ನಿಂದ ಕುಲ್ಫೀ ತೆಗೆದ ಮೇಲೆ ಒಂದು ನೀರಿನ ಬೌಲ್ನಲ್ಲಿ ಮೌಲ್ಡ್ ಅನ್ನು 30 ಸೆಕೆಂಡ್ ಇಟ್ಟು ತೆಗೆಯಿರಿ. ಹೀಗೆ ಮಾಡುವುದರಿಂದ ಕುಲ್ಫೀ ಸುಲಭವಾಗಿ ಹೊರ ಬರುತ್ತದೆ.
* ಹಾಲಿನ ಪೌಡರ್ ಹಾಕುವುದರಿಂದ ಮಿಶ್ರಣದಲ್ಲಿರುವ ನೀರಿನಾಂಶವನ್ನು ಹೀರಿಕೊಳ್ಳುತ್ತದೆ. ಹೀಗಾಗಿ ನೋಡಿಕೊಂಡು ಮಿಶ್ರಣ ಮಾಡಿ.