ಮಕ್ಕಳಿಗೆ ಜಾಮ್ ಅಂದರೆ ತುಂಬಾ ಇಷ್ಟ. ಈಗ ಮಾವಿನ ಹಣ್ಣಿನ ಸೀಸನ್ ಆಗಿದೆ. ಆದರೆ ಮಕ್ಕಳು ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ ಮಕ್ಕಳಿಗಾಗಿ ಮ್ಯಾಂಗ್ ಜಾಮ್ ಮಾಡಿಕೊಡಿ. ಆರೋಗ್ಯಕ್ಕೂ ಉತ್ತಮವಾದ ಮ್ಯಾಂಗೋ ಜಾಮ್ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
1. ಮಾವು – ಎರಡರಿಂದ ಮೂರು
2. ಸಕ್ಕರೆ – ರುಚಿಗೆ ತಕ್ಕಷ್ಟು
3. ನೀರು – ಒಂದು ಲೋಟ
4 ನಿಂಬೆಹಣ್ಣು – ಅರ್ಧ
Advertisement
Advertisement
ಮಾಡುವ ವಿಧಾನ
* ಮುಕ್ಕಾಲು ಭಾಗದಷ್ಟು ಅಂದರೆ ತೀರಾ ಹಣ್ಣಾಗಿರದ ಮಾವಿನಹಣ್ಣು ತೆಗೆದುಕೊಂಡು. ಸಿಪ್ಪೆ ತೆಗೆದು ಸ್ಲೈಸ್ ಮಾಡಿ ಮಿಕ್ಸಿ ಜಾರ್‍ಗೆ ಹಾಕಿ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
* ಈಗ ಒಂದು ನಾನ್ ಸ್ಟಿಕ್ ಪ್ಯಾನ್‍ಗೆ ರುಬ್ಬಿದ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.
* ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ಕೈಯಾಡಿಸುತ್ತೀರಿ.
* ಬಳಿಕ ಅರ್ಧ ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಬೇಯಿಸಿ. ಆಗ ಮಿಶ್ರಣ ಜಾಮ್ ರೀತಿ ಗಟ್ಟಿ ಆಗುತ್ತಾ ಬರುತ್ತದೆ.(ತಳಹತ್ತಿಸಬೇಡಿ)
* ಈಗ ಕೆಳಗಿಳಿಸಿ ಜಾಮ್ ಸ್ಟೋರ್ ಮಾಡಿ ತಿನ್ನಬಹುದು.