ಮಂಗಳೂರು: ಹೊಳೆಗೆ ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಲೈನ್‌ಮನ್ ಈಜಿ ಮರು ಜೋಡಿಸಿದ ಪ್ರಸಂಗ ಬೆಟ್ಟಂಪಾಡಿಯ ಧೂಮಡ್ಕ ಎಂಬಲ್ಲಿ ನಡೆದಿದೆ.
ಧೂಮಡ್ಕದಲ್ಲಿ ಹಾದುಹೋಗುವ ಹೊಳೆಗೆ ವಿದ್ಯುತ್ ತಂತಿ ಬಿದ್ದಿತ್ತು. ಬೆಟ್ಟಂಪಾಡಿ ಮೆಸ್ಕಾಂ ಸಿಬ್ಬಂದಿ ನವಾಜ್ ಎಂಬ ಲೈನ್‌ಮನ್ ಅದನ್ನು ಮರುಜೋಡಿಸಿದ್ದಾರೆ.
ಲೈನ್‌ಮನ್ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಾಹಸಮಯ ಕರ್ತವ್ಯ ಪ್ರದರ್ಶಿಸಿದ್ದಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

