– ಹುಡುಗಿಯರ ಹಣದಲ್ಲೇ ದಿಲ್ದಾರ್ ಮಾಡ್ತಿದ್ದ ʻಮಂಗಳೂರು ಮನ್ಮಥʼ
– ಹೆಂಡ್ತಿ ಓಡಿಹೋಗಿದ್ದಾಳೆ ಅಂತ ಅನ್ಯ ಯುವತಿಯರ ಜೊತೆಗೆ ಚಕ್ಕಂದ
ಮಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಪರಿಚಯ ಮಾಡಿಕೊಂಡು ಮದ್ವೆಯಾಗಿ ನಂಬಿಸಿ ಹಣ ವಂಚಿಸಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ʻಮಂಗಳೂರು ಮನ್ಮಥʼನ ಪ್ರಕರಣ ಬೆಳಕಿಗೆ ಬಂದಿದೆ. ಈತ ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಅನ್ನೋದು ಗೊತ್ತಾಗಿದೆ.
ಗಂಡನ ಪ್ರೀತಿ, ಪ್ರೇಮ, ಪ್ರಣಯದಾಟವನ್ನ ಸ್ವತಃ ಪತ್ನಿಯೇ ಬಟಾಬಯಲು ಮಾಡಿದ್ದು, ಬಜೆಪೆ ನಿವಾಸಿ ಮನೀಶ್ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ (Mangaluru Women Police Station) ದೂರು ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ – 2 ಬಸ್, ಆಟೋ ಜಖಂ

ಪ್ರೀತಿಯನ್ನ ಪ್ರೀತಿಸಿ ಮದ್ವೆಯಾಗಿದ್ದು ಹೇಗೆ?
ಸಂತ್ರಸ್ತೆ ಪ್ರೀತಿ ಎಂಬಾಕೆಗೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಆರೋಪಿ ಪತಿ ಮನೀಶ್, ಬ್ಲ್ಯಾಕ್ಮೇಲ್ ಮಾಡಿ ಆಕೆಯನ್ನ ಮದುವೆ ಆಗಿದ್ದನಂತೆ. ಮದುವೆಗೆ ಮೂರು ದಿನ ಬಾಕಿಯಿರುವಾಗಲೇ ಹಣ ಇಲ್ಲ ಅಂತ ಆತ್ಮಹತ್ಯೆ ನಾಟಕವಾಡಿದ್ದಾನೆ. ಇದನ್ನ ನಂಬಿ ಮದ್ವೆಗೆ ಎಲ್ಲ ಖರ್ಚನ್ನ ತಾವೇ ನೋಡಿಕೊಂಡು ಪ್ರೀತಿ (Preeti) ಪೋಷಕರು ವಿವಾಹ ಕಾರ್ಯ ನಡೆಸಿಕೊಟ್ಟಿದ್ದರು. ಅಲ್ಲದೇ 2 ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್ಗೆ ಕೆಲಸ ಕೊಡಿಸಲು ಪ್ರೀತಿ ಸಹಾಯ ಮಾಡಿದ್ದರು. ಆದ್ರೆ ದುಬೈಗೆ ಹೋದ ಈತ ಬಹರೇನ್ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿ ಶುರುಮಾಡಿದ್ದಾನೆ.
ವಿಚಾರ ತಿಳಿದ ಪ್ರೀತಿ, ಮನೀಶ್‌ನ ಪುರಾಣ ಕೆದಕಲು ಶುರು ಮಾಡಿದ್ದಾರೆ. ಈ ವೇಳೆ ಮನೀಶ್‌ನ ನಿಜರೂಪ ಬಯಲಾಗಿದೆ. ಮದ್ವೆಗೂ ಮುನ್ನ ಅನೇಕ ಯುವತಿಯರ ಜೊತೆಗೆ ಚಕ್ಕಂದ ಆಡಿರೋದು ಗೊತ್ತಾಗಿದೆ. ಇದನ್ನೂ ಓದಿ: ಲಾಭದ ಆಸೆ ತೋರಿಸಿ ಹೂಡಿಕೆ – ಮಹಿಳಾ ಟೆಕ್ಕಿಗೆ 93 ಲಕ್ಷ ವಂಚನೆ

ಹೌದು. ಪ್ರೀತಿ ಜೊತೆ ಮದುವೆಗೂ (Marriage) ಮುನ್ನ ಹಲವು ಯುವತಿಯರ ಜೊತೆ ಲವ್ ಅಫೇರ್ ಹೊಂದಿದ್ದ ಮನೀಶ್, ಅವರ ಬಳಿ ಕೂಡ ಹಣ ಪಡೆದು ಮೋಸ ಮಾಡಿದ್ದ. ಈ ವಿಚಾರವನ್ನ ಆ ಯುವತಿಯರೇ ಪ್ರೀತಿಗೆ ತಿಳಿಸಿದ್ದಾರೆ. ಹಣ ವಾಪಾಸ್ ಕೇಳಿದ್ರೆ ಎಲ್ಲ ಯುವತಿಯರ ಬಳಿ ಒಂದೇ ನಾಟಕ ಆಡಿದ್ದ ಆರೋಪಿ, ತನಗೆ ಬ್ರೈನ್ ಟ್ಯೂಮರ್ ಇದೆ, ಹಾರ್ಟ್‌ನಲ್ಲಿ ತೂತಿದೆ ಎಂದು ಹೇಳಿ ಹಣ ಕೊಡದೇ ಲವ್ ಬ್ರೇಕ್ ಅಪ್ ಮಾಡಿಕೊಳ್ತಿದ್ದ ಎಂದು ದೂರಿನಲ್ಲಿ ಪ್ರೀತಿ ತಿಳಿಸಿದ್ದಾರೆ.
ಟಿಕ್ ಟಾಕ್ ಮಾಡಿ ಯುವತಿಯರಿಗೆ ಗಾಳ ಹಾಕುವ ಮನೀಶ್ ನಡೆತೆಯಿಂದ ಬೇಸತ್ತ ಪತ್ನಿ ಪ್ರೀತಿ, ಇಂತಹ ಗಂಡ ಬೇಡ. ಈತನ ನಂಬಿ ಮತ್ತೆ ಯಾರು ಮೋಸ ಹೋಗಬಾರದು ಎಂದು ಅಲವತ್ತುಕೊಂಡಿದ್ದಾರೆ. ಇದನ್ನೂ ಓದಿ: ಕಾರ್ಖಾನೆ ಸ್ಥಳಾಂತರ ವೇಳೆ ಕೆಮಿಕಲ್ ಟ್ಯಾಂಕ್ ಸ್ಫೋಟ – ಇಬ್ಬರು ಕಾರ್ಮಿಕರು ದುರ್ಮರಣ

