ಮಂಗಳೂರು: ಮಂಗಳೂರಿನ (Mangaluru) ಉಳ್ಳಾಲ ತಾಲೂಕಿನ ತೊಕ್ಕುಟ್ಟುವಿನಲ್ಲಿ ರೈಲು ಹಳಿ (Train Tracks) ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ.
ಮಂಗಳೂರು-ಕೇರಳ (Mangaluru-Kerala Train) ನಡುವಿನ ರೈಲು ಹಳಿ ತಪ್ಪಿಸಲು ಸಂಚು ನಡೆದಿರುವುದು ಭಾರೀ ಆತಂಕ ಹುಟ್ಟಿಸಿದೆ. ರೈಲ್ವೇ ಹಳಿಗಳಲ್ಲಿ ಕಲ್ಲುಗಳನ್ನಿಡಲಾಗಿತ್ತು. ಇದನ್ನೂ ಓದಿ: ಗದಗ| ನೀರಿನ ಪೈಪ್‌ಲೈನ್ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು
Advertisement
Advertisement
ರೈಲ್ವೇ ಹಳಿಯ ಎರಡೂ ಬದಿಗಳಲ್ಲಿ ಆಗಂತುಕರಿಬ್ಬರು ಜಲ್ಲಿಕಲ್ಲುಗಳನ್ನಿಟ್ಟು ಪರಾರಿಯಾಗಿದ್ದಾರೆ. ಎರಡು ರೈಲುಗಳು ಚಲಿಸುವ ಸಂದರ್ಭ ದೊಡ್ಡ ಸದ್ದು ಕೇಳಿ ಸ್ಥಳೀಯರು ಆತಂಕಗೊಂಡಿದ್ದರು. ತಡರಾತ್ರಿ ಸುಮಾರಿಗೆ ತೊಕ್ಕೊಟ್ಟುವಿನ ರೈಲ್ವೇ ಹಳಿಯಲ್ಲಿ ಘಟನೆ ನಡೆಯಿತು.
Advertisement
ಇಬ್ಬರು ಅಗಂತುಕರನ್ನು ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿ ಮಹಿಳೆಯರು ಕಂಡಿದ್ದರು. ರೈಲೊಂದು ಕೇರಳ ಕಡೆಗೆ ತೆರಳಿದ ವೇಳೆ ದೊಡ್ಡ ಸದ್ದು ಕೇಳಿಸಿತು. ಬಳಿಕ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ದೊಡ್ಡ ಸದ್ದು ಕೇಳಿತು. ಪರಿಣಾಮ ಸ್ಥಳೀಯ ಕೆಲವು ಮನೆಗಳಲ್ಲಿಯೂ ಭಾರೀ ಕಂಪನ ಉಂಟಾಯಿತು. ಇದನ್ನೂ ಓದಿ: ಮಂಗಳೂರು| ಮನೆಯೊಳಗೆ ಏಕಾಏಕಿ ನುಗ್ಗಿದ ಚಿರತೆ
Advertisement
ರೈಲು ಅಪಘಾತವೆಂದು ಭಾವಿಸಿ ಸ್ಥಳೀಯರು ಹಳಿಯತ್ತ ದೌಡಾಯಿಸಿದ್ದರು. ಈ ವೇಳೆ ಹಳಿ ಮೇಲಿರಿಸಲಾದ ಜಲ್ಲಿಕಲ್ಲುಗಳು ತುಂಡಾಗಿರುವುದು ಪತ್ತೆಯಾಗಿದೆ. ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರ ಮಾಹಿತಿ ನೀಡಿದರು. ರೈಲ್ವೇ ಹಳಿಗಳಲ್ಲಿ ಕಲ್ಲುಗಳನ್ನಿಟ್ಟು ದುಷ್ಕೃತ್ಯಕ್ಕೆ ಸಂಚು ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಇತ್ತೀಚೆಗಷ್ಟೇ ಉಗ್ರ ಸಂಘಟನೆ ಎಚ್ಚರಿಕೆ ಬೆನ್ನಲ್ಲೇ ಆತಂಕ ಹೆಚ್ಚಾಗಿದೆ. ಪಾಕ್ ಭಯೋತ್ಪಾದಕ ಫರ್ಹಾತ್ ಉಲ್ಲಾ ಘೋರಿ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಮಳೆ – ರಸ್ತೆಗಳು ಜಲಾವೃತ, ಹಲವೆಡೆ ಜನಜೀವನ ಅಸ್ತವ್ಯಸ್ತ