ಮಂಗಳೂರು: ಸಂತ ಜೆರೊಸಾ ಶಾಲೆಯಲ್ಲಿ (St. Gerosa High School, Mangaluru) ಶಿಕ್ಷಕಿಯಿಂದ ಧರ್ಮ ಅವಹೇಳನದ ಪಾಠ ಆರೋಪ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿಕ್ಷಕಿಯನ್ನೇ ವಜಾಗೊಳಿಸಲಾಗಿದೆ.
ಹೌದು. ತೊಕ್ಕೊಟ್ಟುವಿನ ಹೋಲಿ ಏಂಜಲ್ ಶಾಲೆಯಲ್ಲಿ (Holy Angel’s High School) ಪ್ರಾಥಮಿಕ ತರಗತಿ ಶಿಕ್ಷಕಿಯಾಗಿರುವ ಕವಿತಾ ಅವರು ಮಗಳು ಸಂತ ಜೆರೊಸಾ ಶಾಲೆಯ ವಿದ್ಯಾರ್ಥಿನಿ. ಹೀಗಾಗಿ ಮಗಳ ಶಾಲೆಯಲ್ಲಿ ಕೇಳಿ ಬಂದ ಆರೋಪದ ಬಗ್ಗೆ ಅವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಈ ಬೆನ್ನಲ್ಲೇ ಇದೀಗ ಅವರಿಗೆ ಬೆದರಿಕೆ ಕರೆಗಳು ಆರಂಭವಾಗಿದೆ. ಜೊತೆಗೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಲೆಯಿಂದಲೂ ಗೇಟ್ ಪಾಸ್ ನಿಡಲಾಗಿದೆ.
Advertisement
Advertisement
ಘಟನೆಯ ದಿನ ಅಂದರೆ ಫೆ.10 ರಂದು ಶಿಕ್ಷಕಿ ಕವಿತಾ ಹೆತ್ತವರೊಂದಿಗೆ ಡಿಡಿಪಿಐ ಕಛೇರಿಗೆ ಬಂದಿದ್ದರು. ಈ ವೇಳೆ ಕವಿತಾ ಅವರು ಮಾತನಾಡಿದ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅಷ್ಟಕ್ಕೇ ಹೋಲಿ ಏಂಜಲ್ ಶಾಲೆಯ ಆಡಳಿತ ಮಂಡಳಿಯು ಶಿಕ್ಷಕಿ ಹುದ್ದೆಯಿಂದಲೇ ವಜಾ ಮಾಡಿದೆ. ನಿಮ್ಮ ಸೇವೆ ಇನ್ನು ಅಗತ್ಯ ಇಲ್ಲ ಅಂತಾ ಹೋಲಿ ಏಂಜಲ್ ಶಾಲೆಯಿಂದ ಗೇಟ್ ಪಾಸ್ ಕೊಡಲಾಗಿದೆ. ಆ ಬಳಿಕ ಕವಿತಾ ಅವರ ಮೊಬೈಲ್‍ಗೆ ವಿದೇಶಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಆರಂಭಿಸಿದವು.
Advertisement
Advertisement
ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಕವಿತಾ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಸದ್ಯ ಶಿಕ್ಷಕಿ ಕವಿತಾ ಅವರು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಎಚ್ಚರ: ಕೊಲ್ಲೂರು ಮೂಕಾಂಬಿಕೆ ದೇಗುಲದ ಹೆಸರಿನಲ್ಲಿ ನಕಲಿ ಟ್ರಸ್ಟ್