ಮನಮಾ: ಹಮಾಸ್ ಭಯೋತ್ಪಾದಕರ (Hamas Terrorist) ಕೃತ್ಯ ಖಂಡಿಸಿ ಟ್ವೀಟ್ ಮಾಡಿದ್ದಕ್ಕೆ ಮಂಗಳೂರು (Mangaluru) ಓದಿದ ವೈದ್ಯರನ್ನು ಬಹರೇನ್ ಬಂಧಿಸಿದೆ.
ಇಸ್ರೇಲ್ (Israel) ಪರವಾಗಿ ಟ್ವೀಟ್ ಮಾಡಿದ್ದಕ್ಕೆ ಮಂಗಳೂರಿನ ಕೆಎಂಸಿಯಲ್ಲಿ ಎಂಡಿ ಓದಿರುವ ಡಾ. ಸುನೀಲ್ ರಾವ್ (Sunil Rao) ಅವರನ್ನು ರಾಯಲ್ ಬಹರೇನ್ ಆಸ್ಪತ್ರೆ ಆಡಳಿತ ಮಂಡಳಿ (Royal Bahrain Hospital) ವಜಾ ಮಾಡಿದೆ. ಅಷ್ಟೇ ಅಲ್ಲದೇ ಇದು ಸೈಬರ್ ಕ್ರೈಂ ಎಂದು ಪರಿಗಣಿಸಿ ಬಹರೇನ್ ಪೊಲೀಸರು ಸುನೀಲ್ ರಾವ್ ಅವರನ್ನು ಬಂಧಿಸಿದ್ದಾರೆ.
Advertisement
Too late for all this drama.
This is you, right ? pic.twitter.com/0Xtu2PWyv5
— Khanzadah I Awadh (@Khanzadah_) October 19, 2023
Advertisement
ಹಮಾಸ್ ಉಗ್ರರ ದಾಳಿಯನ್ನು ಖಂಡಿಸಿ ಇಸ್ರೇಲ್ ಪರವಾಗಿ 50 ವರ್ಷದ ಸುನೀಲ್ ರಾವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಅನ್ನು ಗಮನಿಸಿದ ಬಳಕೆದಾರರು ಬಹರೇನ್ ಸರ್ಕಾರಕ್ಕೆ ಟ್ಯಾಗ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆ ಕೆಲಸದಿಂದ ವಜಾ ಮಾಡಿದೆ.
Advertisement
ಡಾ. ಸುನೀಲ್ ರಾವ್ ಅವರ ಪೋಸ್ಟ್ ನಮ್ಮ ಸಮಾಜಕ್ಕೆ ವಿರುದ್ಧವಾಗಿದೆ. ಅವರ ಸಿದ್ದಾಂತ ನಮಗೆ ಒಪ್ಪಿತವಲ್ಲ. ಅದು ನಮ್ಮ ನಿಲುವಲ್ಲ. ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಕೆಲಸದಿಂದ ವಜಾ ಮಾಡಿದ್ದೇವೆ ಎಂದು ಬಹರೇನ್ ರಾಯಲ್ ಹಾಸ್ಪಿಟಲ್ ಪ್ರತಿಕ್ರಿಯೆ ನೀಡಿದೆ. ಇದನ್ನೂ ಓದಿ: Virat Kohli: ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ಉಡೀಸ್ ಮಾಡಿದ ಕೊಹ್ಲಿ!
Advertisement
I would like to apologized about the statement that I posted on this platform.
It was insensitive in the context of the current event. As a doctor all lives matter. I respect this country its people and its religion deeply as I have been here for past 10 years.
كلماتي و افعالي
— SUNIL J RAO (@shilpasunil_rao) October 19, 2023
ಕೆಲಸದಿಂದ ವಜಾಗೊಳಿಸುವ ಮುನ್ನ ಸುನಿಲ್ ರಾವ್ ಎಕ್ಸ್‌ನಲ್ಲಿ ಕ್ಷಮೆ ಕೇಳಿದ್ದರು. ಬಹರೇನ್‌ನಲ್ಲಿ 10 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಈ ದೇಶದ ಜನರನ್ನು, ಧರ್ಮವನ್ನು ಗೌರವಿಸುತ್ತೇನೆ. ಒಬ್ಬ ಡಾಕ್ಟರ್ ಆಗಿ ಸಾವು ನೋವುಗಳ ಬಗ್ಗೆ ಮಾತನಾಡಿದ್ದೆ. ಭಾವನೆಗಳಿಗೆ ಧಕ್ಕೆಯಾದರೆ ಕ್ಷಮಿಸಿ ಎಂದು ಪೋಸ್ಟ್ ಮಾಡಿದ್ದರು.
ಆಸ್ಪತ್ರೆಯ ಹೇಳಿಕೆಯಲ್ಲಿ ಏನಿದೆ?
ಇಂಟರ್ನಲ್ ಮೆಡಿಸಿನ್‌ನಲ್ಲಿ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸುನೀಲ್ ರಾವ್ ಅವರು ನಮ್ಮ ಸಮಾಜಕ್ಕೆ ಆಕ್ಷೇಪಾರ್ಹವಾದ ಟ್ವೀಟ್‌ಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅವರ ಪೋಸ್ಟ್‌ಗಳು ಮತ್ತು ಸಿದ್ಧಾಂತಗಳು ವೈಯಕ್ತಿಕವಾಗಿದ್ದು ಆಸ್ಪತ್ರೆಯ ಅಭಿಪ್ರಾಯ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವುದಿಲ್ಲ. ಇದು ನಮ್ಮ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಮತ್ತು ನಾವು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಕೂಡಲೇ ಅವರ ಸೇವೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೊನೆಗೊಳಿಸಲಾಗಿದೆ ಎಂದು ರಾಯಲ್ ಬಹರೇನ್ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
Web Stories