ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳ ತನಿಖೆಯನ್ನು ಹಸ್ತಾಂತರಿಸುವ ಮೊದಲೇ ಎನ್‍ಐಎಗೆ ತನಿಖೆಯನ್ನು ಪ್ರಾರಂಭಿಸಿದ್ದು, ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್‍ಐಎ ಟೀಂ ಬೆಳ್ಳಾರೆಗೆ ಭೇಟಿ ನೀಡಿ ಸಹ ಕೆಲ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಆದರೆ, ಇನ್ನೂ ಅಧಿಕೃತವಾಗಿ ಪ್ರಕರಣ ಎನ್‍ಐಎ ವರ್ಗವಾಗಿಲ್ಲ. ಸದ್ಯದಲ್ಲೇ ಹಸ್ತಾಂತರ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Advertisement
Advertisement
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕಾಗಿದ್ದು, ಹೊಸ ಹೊಸ ವಿಚಾರಗಳು ಬಯಲಾಗುತ್ತಿವೆ. ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಬೆಂಗಳೂರಲ್ಲಿ ಇಬ್ಬರನ್ನು, ಕೇರಳದಲ್ಲಿ ಒಬ್ಬರನ್ನು ಪೊಲೀಸರು ಹೆಡೆ ಮುರಿಕಟ್ಟಿದ್ದಾರೆ. ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಳ್ಯ ಮೂಲದ ಅಲ್ತಾಫ್ ಮತ್ತು ಇರ್ಫಾನ್‍ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇವರು ಪ್ರವೀಣ್ ಹತ್ಯೆಯ ದಿನ ಬೆಳ್ಳಾರೆಯಲ್ಲಿಯೇ ಇದ್ದರು ಎಂಬುದು ತಿಳಿದುಬಂದಿದೆ. ಪ್ರವೀಣ್ ಕೊಲೆಯಲ್ಲಿ ಇವರ ಪಾತ್ರ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಝಾಕೀರ್ ವಿರುದ್ಧ ಕೊಲೆಗಡುಕರಿಗೆ 2 ದಿನ ಆಶ್ರಯ ನೀಡಿ, ಬಿರಿಯಾನಿ ಪೂರೈಸಿದ್ದ ಆರೋಪವಿದೆ.
Advertisement
Advertisement
ಇನ್ನೂ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಮಂಗಳೂರಲ್ಲಿ ಡಿಜಿಪಿ ಪ್ರವೀಣ್ ಸೂದ್ ಉನ್ನತ ಮಟ್ಟದ ಸಭೆ ನಡೆಸಿ, ಹಲವು ಸೂಚನೆ ನೀಡಿದ್ದಾರೆ. ಆರೋಪಿಗಳು ಯಾವುದೇ ಧರ್ಮೀಯರಾಗಿದ್ರೂ ಬಿಡೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸುರತ್ಕಲ್‌ನಲ್ಲಿ ಬೀಚ್‌ನಲ್ಲಿ ಭಿನ್ನ ಕೋಮಿನ ಯುವಕನ ಜೊತೆ ಬಂದ ಯುವತಿ ಮೇಲೆ ರೇಪ್
ಸುಹಾಸ್, ಮೋಹನ್, ಗಿರಿ ಮತ್ತು ಅಮಿತ್ ಎಂಬ ಪಾತಕಿಗಳು ಫಾಝಿಲ್ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದ್ದು, ಯಾವುದೇ ಕ್ಷಣದಲ್ಲಿ ಈ ನಾಲ್ವರನ್ನು ಬಂಧಿಸುವ ಸಂಭವ ಇದೆ. ಈ ಹಿಂದೆ ಹಲವು ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಸುಹಾಸ್ ಇದರಲ್ಲೂ ಪ್ರಮುಖ ಆರೋಪಿ ಎನ್ನಲಾಗಿದೆ. ಅಮಿತ್ ಕಾರು ಚಾಲಕ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ. ಇದನ್ನೂ ಓದಿ: ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು