ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ (Mangaluru Private Hospital) ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಅಬ್ದುಲ್ ಹಲೀಂ(37) ಹಾಗೂ ಶಮೀನಾ ಬಾನು(22) ಎಂದು ಗುರುತಿಸಲಾಗಿದೆ.
Advertisement
Advertisement
ಏನಿದು ಪ್ರಕರಣ..?: ಬೈಕ್ ಅಪಘಾತದಲ್ಲಿ ಗಾಯಗೊಂಡು ಅಬ್ದುಲ್ ಹಲೀಂ ಮತ್ತು ಆತನ ಸ್ನೇಹಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೀಗಾಗಿ ಗಾಯಾಳುಗಳನ್ನು ನೋಡಲು ತಾಯಿ, ತನ್ನ ಅಪ್ರಾಪ್ತ ಮಗಳನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಶಮೀನಾ ಬಾನು ಜೊತೆ ಬಾಲಕಿಯನ್ನು ಬಿಟ್ಟು ತಾಯಿ ಪೊಲೀಸ್ ಠಾಣೆಗೆ ಹೋಗಿದ್ದರು. ಇದನ್ನೂ ಓದಿ: ಡ್ಯಾಂನಲ್ಲಿ ತುಂಬಿ ಹಿಡಿದುಟ್ಟುಕೊಳ್ಳಲು ಆಗದೇ ಇದ್ದಾಗ ತಮಿಳುನಾಡಿಗೆ ನೀರು ಬಿಟ್ಟಿದ್ವಿ: ಹೆಚ್ಡಿಕೆ
Advertisement
Advertisement
ಇತ್ತ ಆಸ್ಪತ್ರೆಯಲ್ಲಿ ಅಬ್ದುಲ್ ಹಲೀಂ-ಶಮೀನಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಇದನ್ನು ಅಪ್ರಾಪ್ತೆ ನೋಡಿದ್ದಾಳೆ. ಹೀಗಾಗಿ ಅಬ್ದುಲ್ ಹಲೀಂ, ಬಾಲಕಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಈ ವೇಳೆ ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಆಗ ಶಮೀನಾ ಬಾನು ಬಾಲಕಿಯ ಕೈ ಹಿಡಿದು ಬಾಯಿ ಮುಚ್ಚಿ ಅತ್ಯಾಚಾರ ಮಾಡಲು ಸಹಾಯ ಮಾಡಿದ್ದಾಳೆ. ಬಳಿಕ ಹಲೀಂ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Web Stories