ಮಂಗಳೂರು: ಸ್ಪೀಡ್ ರೋಲರ್ ಸ್ಕೇಟಿಂಗ್ ಜಿಲ್ಲಾ ಆಯ್ಕೆ ಪ್ರಕ್ರಿಯೆ ಮತ್ತು ಚಾಂಪಿಯನ್ ಶಿಪ್ 2018-19ರಲ್ಲಿ ಮಂಗಳೂರಿನ ಹೈ ಫೈಯರ್ಸ್ ಸ್ಕೇಟಿಂಗ್ ಕ್ಲಬ್‍ಗೆ 100 ಪದಕಗಳು ಬಂದಿವೆ.
ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಶನಿವಾರ ಹಾಗೂ ಭಾನುವಾರ ಸ್ಕೇಟಿಂಗ್ ಸ್ಪರ್ಧೆ ನಡೆದಿತ್ತು. ಈ ವೇಳೆ 8 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 77 ಪದಕಗಳನ್ನು ಮತ್ತು 8 ವರ್ಷಕ್ಕಿಂತ ಕೆಳಗಿನ ವಿಭಾಗದಲ್ಲಿ 23 ಪದಕಗಳನ್ನು ಹೈ ಫ್ಲೈಯರ್ಸ್ ಕ್ಲಬ್ ಗಳಿಸಿತು. ಈ ಮೂಲಕ ಚಿನ್ನ, ಬೆಳ್ಳಿ ಮತ್ತು ಕಂಚಿನ ಸೇರಿದಂತೆ ಒಟ್ಟು 100 ಪದಕಗಳನ್ನು ಕ್ಲಬ್ ತನ್ನದಾಗಿಸಿಕೊಂಡಿದೆ.
Advertisement
8 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ 37 ಸ್ಕೇಟರ್ ಗಳು ಭಾಗವಹಿಸಿದ್ದು, ಅವರಲ್ಲಿ 22 ಜನರು ನವೆಂಬರ್ ತಿಂಗಳು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಗೆ ತೇರ್ಗಡೆ ಹೊಂದಿದ್ದಾರೆ. ಪದಕ ವಿಜೇತ ಸ್ಕೇಟರ್ ಗಳಿಗೆ ಕೋಚ್ ಮೋಹನ್ ದಾಸ್ ಹಾಗೂ ಜಯರಾಜ್ ಅವರು ತರಬೇತಿ ನೀಡುತ್ತಿದ್ದಾರೆ.
Advertisement
Advertisement
ಯಾರಿಗೆ ಎಷ್ಟು ಪದಕ?:
ವಿಜೇತರ ಪೈಕಿ ಡೇನಿಯಲ್ ಕೊನ್ಸೆಸ್ಸೋ, ಖುಷಿರಾಣಿ, ಸುಹಾನ್ ರಾಜ್ ಅವರು ತಲಾ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ವಿವೇಕ್ ಯೋಗರಾಜ್, ದೀಯಾ ದಾಸ್, ಮೋಕ್ಷಾ ಸುವರ್ಣ, ತನ್ಮಯ್ ಕೊಟ್ಟಾರಿ, ಮೊಹಮ್ಮದ್ ಶಮಿಲ್ ಅರ್ಶಾದ್, ಕೃತಿ ಕಯ್ಯ, ಸ್ವಸ್ತಿ ಶ್ರೀ ಶೆಟ್ಟಿ, ವಿಹಾನ್ ಸುವರ್ಣ, ನಿಹಾರಿಕಾ ಟಿ. ತಲಾ 3 ಚಿನ್ನಕ್ಕೆ ಕೊರಳೊಡಿದ್ದಾರೆ.
Advertisement
ಡೇಶಿಯಲ್ ಕಾನ್ಸೆಸ್ಸೋ ಮೂರು ಚಿನ್ನ 1 ಬೆಳ್ಳಿ, ರಚಿತ್ ಡಿಸೋಜ 2 ಚಿನ್ನ 2 ಬೆಳ್ಳಿ, ಅರ್ಪಿತಾ ಶೇಟ್ 1 ಚಿನ್ನ ಮೂರು ಬೆಳ್ಳಿ, ರುಷಭ್ ಮಂಜೇಶ್ವರ್ 1 ಚಿನ್ನ 2 ಬೆಳ್ಳಿ, ಫರಾಝ್ ಫರೀದ್ 3 ಬೆಳ್ಳಿ, ಅನಘಾ ರಾಜೇಶ್ 3 ಬೆಳ್ಳಿ, ಶಹಾನ್ ಮಹಮ್ಮದ್ 2 ಬೆಳ್ಳಿ 1 ಕಂಚು, ಮಯಾನ್ ಸಿಕ್ವೇರಾ 2 ಬೆಳ್ಳಿ 1 ಕಂಚು, ಶಮಿತ್ ಶೆಟ್ಟಿ 2 ಬೆಳ್ಳಿ, ಅದ್ವಿಕಾ ಶೆಟ್ಟಿ 1 ಬೆಳ್ಳಿ 2 ಕಂಚು, ಶಹೀಮ್ ಮೊಹಮ್ಮದ್ 2 ಕಂಚು, ನಿರ್ಮಾಯ್ ವೈ.ಎನ್. 1 ಕಂಚು, ಅದ್ವಿಕ್ ಶೆಟ್ಟಿ 1 ಕಂಚು, ಫರಾಝ್ 1 ಚಿನ್ನ, ರಿಷನ್ ನಝರೇತ್ 1 ಕಂಚಿನ ಪದಕ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv