– ದಸರಾ ಮೆರವಣಿಗೆಗೆ ಮೆರುಗು ನೀಡಿದ ವಿವಿಧ ಸ್ತಬ್ಧ ಚಿತ್ರಗಳು
ಮಂಗಳೂರು: ಜಗತ್ ಪ್ರಸಿದ್ಧ ಮಂಗಳೂರು ದಸರಾ (Mangaluru Dasara) ಮೆರವಣಿಗೆ ಭಾನುವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ (Kudroli Gokarnanatha Temple) ಸಂಜೆ 4 ಗಂಟೆಗೆ ಆರಂಭಗೊಂಡಿತು. ಸುಮಾರು 60ಕ್ಕೂ ಅಧಿಕ ಸ್ತಬ್ಧಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರುಗು ನೀಡಿತು. ದೇಶ – ವಿದೇಶಗಳಿಂದ ಬಂದ ಲಕ್ಷಾಂತರ ಮಂದಿ ಭಕ್ತರು ಈ ದಸರಾ ಮೆರವಣಿಗೆಗೆ ಸಾಕ್ಷಿಯಾದರು.
Advertisement
Advertisement
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕಳೆದ 10 ದಿನಗಳಿಂದ ಅದ್ಧೂರಿಯಾಗಿ ನಡೆದ ನವರಾತ್ರಿ ಮಹೋತ್ಸವಕ್ಕೆ ದಸರಾ ಮೆರವಣಿಗೆಯೊಂದಿಗೆ ತೆರೆ ಕಾಣಲಿದೆ. ಅಕ್ಟೋಬರ್ 3 ರಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡ ಈ ದಸರಾ ಮೆರವಣಿಗೆ ಇಂದು ಬೃಹತ್ ಮೆರವಣಿಗೆಯೊಂದಿಗೆ ಸಂಪನ್ನಗೊಳ್ಳಲಿದೆ. ಸಂಜೆ ಸುಮಾರು 4 ಗಂಟೆಗೆ ಕ್ಷೇತ್ರದಿಂದ ಹೊರಟ ಈ ಬೃಹತ್ ದಸರಾ ಮೆರವಣಿಗೆಯಲ್ಲಿ ವಿಘ್ನನಿವಾರಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯರ ಮೂರ್ತಿಗಳನ್ನು ಸ್ತಬ್ಧ ಚಿತ್ರದೊಂದಿಗೆ ಕೊಂಡೊಯ್ಯಲಾಯಿತು. ದಸರಾ ಮಹೋತ್ಸವದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ಈ ಬೃಹತ್ ದಸರಾ ಮೆರವಣಿಗೆ ನಡೆಯುತ್ತಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಇಷ್ಟು ಅಚ್ಚುಕಟ್ಟಾಗಿ ನಡೆಯುವ ಈ ದಸರಾವನ್ನು ಭಕ್ತರ ಸಹಕಾರದಿಂದ ಅದ್ಧೂರಿಯಾಗಿ ನಡೆಸಲಾಗುತ್ತದೆ. ಇದನ್ನೂ ಓದಿ: ಮಂಚಹಳ್ಳಿ, ಕೋಟೆಕೆರೆಯಲ್ಲಿ ಆನೆ ದಾಳಿಗೆ ರೈತರ ಟೊಮೆಟೊ, ತೆಂಗು ನಾಶ
Advertisement
Advertisement
ಸುಮಾರು ಒಂದು ಸಾವಿರ ಆಕರ್ಷಕ ಕೇರಳ ಕೊಡೆಗಳು, ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‌ಗಳು, ಸುಮಾರು 50 ಜಾನಪದ ಕುಣಿತಗಳ ತಂಡ, ಕೇರಳ ಚೆಂಡೆವಾದನ, ಕೊಂಬು ಕಹಳೆ, ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 63 ಸ್ತಬ್ಧಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರಗು ನೀಡಿತು. ದಾರಿಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ಪೊಲೀಸ್ ಕಸ್ಟಡಿಗೆ ಓರ್ವ ಕೊಲೆ ಆರೋಪಿ
ಶ್ರೀ ಕ್ಷೇತ್ರದಿಂದ ಇಂದು ಸಂಜೆ ಹೊರಟ ಈ ಮೆರವಣಿಗೆ ನಗರದ ಸುಮಾರು 7 ಕಿಲೋ ಮೀಟರ್ ಸಾಗಿದ್ದು, ಸೋಮವಾರ ಮುಂಜಾನೆ 8 ಗಂಟೆಗೆ ಮತ್ತೆ ಶ್ರೀ ಕ್ಷೇತ್ರಕ್ಕೆ ತಲುಪಲಿದೆ. ಕ್ಷೇತ್ರದ ಪುಷ್ಕರಣಿಯಲ್ಲಿ ಗಣೇಶ, ಆದಿಶಕ್ತಿ, ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಯನ್ನು ವಿಸರ್ಜಿಸಲಾಗುವುದು. ಇದರೊಂದಿಗೆ ಈ ದಸರಾ ಮೆರವಣಿಗೆಗೆ ತೆರೆ ಬೀಳಲಿದೆ. ಇದನ್ನೂ ಓದಿ: ರಾಜ್ಯದ ಜನರ ಆಶೀರ್ವಾದ ಇರೋವರೆಗೂ ನನ್ನ ಯಾರೂ ಅಲ್ಲಾಡಿಸೋಕೆ ಆಗಲ್ಲ: ಸಿದ್ದರಾಮಯ್ಯ