ಮಡಿಕೇರಿ: ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ (Karavali) ಶಂಕಿತ ಉಗ್ರ ಶಾರೀಕ್ ಆಟೋದಲ್ಲಿ ಕುಕ್ಕರ್ ಬಾಂಬ್ (Cooker Bomb) ಹಿಡಿದುಕೊಂಡು ಬಂದು ಭಾರೀ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿ ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದ. ಈ ಬಾಂಬ್ ಬ್ಲಾಸ್ಟ್ ಮಾಡುವ ಮೊದಲು ಕೊಡಗು ಜಿಲ್ಲೆಯ ಹೋಂಸ್ಟೇ ಒಂದಕ್ಕೆ ಆತ ಮತ್ತು ಇಬ್ಬರು ಮಹಿಳೆಯರು (Womens) ಸೇರಿ ಆತನ ತಂಡ ಬಂದು ಹೋಗಿತ್ತು ಎಂದು ಇದೀಗ ತನಿಖೆ ವೇಳೆ ತಿಳಿದು ಬಂದಿದೆ.
Advertisement
ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ (Mohammed Shariq) ಹಾಗೂ ಆತನ ಸಹಚರರು ಕೊಡಗು ಜಿಲ್ಲೆಗೂ ಭೇಟಿ ನೀಡಿದ್ರು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಹಾಗೂ ಮಂಗಳೂರು (Mangaluru) ಪೊಲೀಸರು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದ ಓಟೆಕಾಡ್ ಹೋಂಸ್ಟೇಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಹೋಂಸ್ಟೇಗೆ ಶಾರೀಕ್ ಜೊತೆ ಅತನ ಸಹಚರರು ಸೇರಿದಂತೆ ಇಬ್ಬರು ಮಹಿಳೆಯರು ಬಂದು ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕ ಶಾಕ್!
Advertisement
Advertisement
ಹೀಗಾಗಿ ಎನ್‍ಐಎ ತನಿಖಾ ತಂಡ ಹಾಗೂ ಮಂಗಳೂರು ಪೊಲೀಸರು ಹೋಂಸ್ಟೇಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹೋಂಸ್ಟೇ ಮಾಲೀಕರನ್ನು ವಿಚಾರಣೆ ನಡೆಸಿದಾಗ ಶಾರೀಕ್ ಹಾಗೂ ಅವನೊಂದಿಗೆ ಸಹಚರರು ಹಾಗೂ ಇಬ್ಬರು ಮಹಿಳೆಯರು ಬಂದು ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಹೋಂಸ್ಟೇ ಮಾಲೀಕನನ್ನು ಮಂಗಳೂರಿಗೆ ಬರುವಂತೆ ಪೊಲೀಸರು ತಿಳಿಸಿ ಹೋಗಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್ ಕೇಸ್‍ನಲ್ಲಿ NIAಗೆ ಸ್ಫೋಟಕ ಮಾಹಿತಿ- ಉಗ್ರನ ಅಕೌಂಟ್‍ಗೆ ಬರ್ತಿತ್ತು ಡಾಲರ್
Advertisement
ಈ ಓಟೆಕಾಡ್ ಹೋಂಸ್ಟೇ ಮಾಲೀಕರು ಪಂಚಾಯತ್‍ನಿಂದ ಕಳೆದ ಆರು ತಿಂಗಳ ಹಿಂದೆಯಿಂದ ಲೈಸೆನ್ಸ್ ತೆಗೆದುಕೊಳ್ಳದೆ ಹಾಗೂ ಹೋಂಸ್ಟೇ ಮಾರ್ಗಸೂಚಿ ಪಾಲನೆ ಮಾಡದೆ ಇರುವುದರಿಂದ ಹೋಂಸ್ಟೇಗೆ ಯಾರು ಬರುತ್ತಾರೆ, ಹೋಗುತ್ತಾರೆ ಅನ್ನೋದರ ಬಗ್ಗೆ ದಾಖಲೆಗಳು ಇಲ್ಲ ಅನ್ನೋದು ಎನ್‍ಐಎ ಆಧಿಕಾರಿಗಳಿಗೆ ತಿಳಿದು ಬಂದಿದೆ. ಈ ಬಗ್ಗೆ ಗ್ರಾಮಪಂ ಅಧ್ಯಕ್ಷೆ ಚೋಟ್ಟೆಯoಡಮಡ ಸರಿತಾ ಮಾತನಾಡಿ, ಉಗ್ರ ಶಾರೀಕ್ ನಮ್ಮ ಗ್ರಾಮಕ್ಕೂ ಬಂದು ಹೋಗಿರುವುದು ನಿಜಕ್ಕೂ ಗ್ರಾಮದ ಜನರಿಗೆ ಅತಂಕ ಉಂಟುಮಾಡಿದೆ. ಯಾರೇ ಹೋಂಸ್ಟೇ, ರೆಸಾರ್ಟ್ ನಡೆಸುವ ಮಾಲೀಕರು ಬರುವ ಪ್ರವಾಸಿಗರ ಮೂಲ ದಾಖಲೆ ಹಾಗೂ ಮಾಹಿತಿಗಳನ್ನು ತೆಗೆದುಕೊಂಡು ಅನುಮಾನ ಬರುವ ವ್ಯಕ್ತಿಗಳು ಕಂಡುಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ.