ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (Mangaluru Cooker Bomb Blast) ಪ್ರಕರಣದ ಪ್ರಮುಖ ಆರೋಪಿ ಉಗ್ರ ಶಾರೀಕ್ (Mohammed Shariq) ಎರಡೂವರೆ ತಿಂಗಳ ಸತತ ಚಿಕಿತ್ಸೆ ನಂತರ ಸೋಮವಾರ ಬಿಡುಗಡೆಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಉಗ್ರ ಶಾರೀಕ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಆದರೆ ಸ್ಫೋಟದ ವೇಳೆ ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮಂಗಳೂರು, ಕೊಯಮತ್ತೂರಲ್ಲಿ ಸ್ಫೋಟ ಮಾಡಿದ್ದು ನಾವೇ- ಹೊಣೆ ಹೊತ್ತ ಐಎಸ್‍ಕೆಪಿ
Advertisement
Advertisement
ಸತತ ಎರಡೂವರೆ ತಿಂಗಳು ಚಿಕಿತ್ಸೆ ಪಡೆದ ಶಾರೀಕ್, ಇಂದು ಆಸ್ಪತ್ರೆಯಿಂದ ಸಂಪೂರ್ಣ ಗುಣಮುಖವಾಗಿ ಡಿಸಾರ್ಜ್ ಆಗಿದ್ದಾನೆ. ಆಸ್ಪತ್ರೆಯಿಂದ ನೇರವಾಗಿ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಎನ್‌ಐಎ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಹತ್ತು ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿದ್ದಾರೆ.
Advertisement
ಮಂಗಳವಾರದಿಂದ ಅಧಿಕೃತವಾಗಿ ಸ್ಫೋಟದ ಬಗ್ಗೆ ಎನ್‌ಐಎ ಅಧಿಕಾರಿಗಳು ವಿಚಾರಣೆ ಶುರು ಮಾಡಲಿದ್ದಾರೆ. ವಿಚಾರಣೆ ನಂತರ ಮಂಗಳೂರು ಸೇರಿದಂತೆ ವಿವಿಧ ಜಾಗಗಳಲ್ಲಿ ಸ್ಥಳ ಮಹಜರು ಮಾಡಿ ಮತ್ತಷ್ಟು ತನಿಖೆ ಚುರುಕುಗೊಳಿಸಲು ಸಿದ್ಧತೆ ನಡೆದಿದೆ.