ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಹುಚ್ಚಾಟ ನಡೆಸಿದ್ದು, ಪಂದ್ಯ ಕಟ್ಟಿ ನಿಯಮದಂತೆ ವಿದ್ಯಾರ್ಥಿನಿಯನ್ನು ವಿದ್ಯಾರ್ಥಿ ಚುಂಬಿಸಿದ ಘಟನೆ ನಡೆದಿದೆ.
ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಚುಂಬನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿದ್ಯಾರ್ಥಿಗಳೆಲ್ಲಾ ಸೇರಿ ಟ್ರೂತ್ ಆ್ಯಂಡ್ ಡೇರ್ ಗೇಮ್ನ್ನು ಆಡುತ್ತಿದ್ದರು. ಈ ವೇಳೆ ಪಂದ್ಯದ ನಿಯಮದಂತೆ ವಿದ್ಯಾರ್ಥಿನಿಯನ್ನು ವಿದ್ಯಾರ್ಥಿ ಚುಂಬಿಸಿದ್ದಾನೆ. ತನ್ನ ಸಹಪಾಠಿಗಳ ಎದುರೇ ಖುಲ್ಲಂ ಖುಲ್ಲಾ ವಿದ್ಯಾರ್ಥಿಗಳು ಚುಂಬಿಸಿದ್ದು, ಈ ದೃಶ್ಯವನ್ನು ಉಳಿದವರು ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ನಾನು SSLC ಫೇಲ್, ಆದರೆ ಯಾರು ಈ ಕಷ್ಟ ಅನುಭವಿಸಬಾರ್ದು- ಟಾಪರ್ ವಿದ್ಯಾರ್ಥಿಗಳಿಗೆ ದ್ವಿಚಕ್ರ ಕೊಟ್ಟ ಜಮೀರ್
ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳು ದಾರಿ ತಪ್ಪುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೃಶ್ಯ ವೈರಲ್ ಆಗುತ್ತಿದ್ದಂತೆ, ಘಟನೆ ಸಂಬಂಧಿಸಿ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಇಂದು ಫಲಿತಾಂಶ ಪ್ರಕಟ – ದ್ರೌಪದಿ ಮುರ್ಮು ಗ್ರಾಮದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ