ಮಂಗಳೂರು: ಬಿಜೆಟ್ ಮಂಡನೆಗೂ ಮುನ್ನ ಶುಕ್ರವಾರ ಬಿಡಗಡೆ ಮಾಡಿದ ಆಡಿಯೋದಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ ಎಂದು ನಾನು ಹೇಳಿದ್ದೇನಾ ಎಂದು ಕುಮಾರಸ್ವಾಮಿ ಇಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ಬಗ್ಗೆ ತನಿಖೆ ನಡೆಸಬೇಕಾದಂತಹ ಅವಶ್ಯತೆ ಇದೆ. ಪ್ರಧಾನಿಗಳೇ ಅವರ ಬಗ್ಗೆ ತನಿಖೆ ನಡೆಸುವ ತೀರ್ಮಾನ ಮಾಡಿ ಸಹಕಾರ ಕೊಟ್ಟರೆ ಅವರ ನೇತೃತ್ವದಲ್ಲೇ ತನಿಖೆ ನಡೆಸಲು ಆದೇಶ ಮಾಡುವುದಕ್ಕೂ ತಯಾರಾಗಿದ್ದೇವೆ.
ನಾನು ಮಾತೇ ಆಡಿಲ್ಲ. ಅದು ಮಿಮಿಕ್ರಿ ಮಾಡಿರುವಂತದ್ದು ಎಂದು ಬಿಜೆಪಿ ನಾಯಕರುಗಳು ಹಾಗೂ ಯಡಿಯೂರಪ್ಪನವರು ಕೂಡ ಹೇಳಿದ್ದಾರೆ. ಆದ್ರೆ ಇದರ ಸತ್ಯಾಸತ್ಯತೆ ಹೊರಗೆ ಬರಬೇಕು. ಆ ದೃಷ್ಟಿಯಿಂದ ಅದರ ಬಗ್ಗೆ ತನಿಖೆ ನಡೆಸುವ ನಿರ್ಧಾರ ಮಾಡಲಾಗುವುದು ಎಂದ ಅವರು, ಯಡಿಯೂರಪ್ಪನವರು ಮಾತನಾಡಿದ್ದಾರೆ ಎಂದು ಹೇಳಿದ್ದೀನಾ ಎಂದು ಪ್ರಶ್ನಿಸಿದ್ರು. ಇದನ್ನೂ ಓದಿ: ದೇವದುರ್ಗ ಐಬಿಯಲ್ಲಿ ಬಿಎಸ್‍ವೈಯಿಂದ ಆಪರೇಷನ್ ಕಮಲ – ಸ್ಫೋಟಕ ಆಡಿಯೋ ಔಟ್
ಆ ಒಂದು ಆಡಿಯೋದಲ್ಲಿ ಸ್ಪೀಕರ್ ಹೆಸರನ್ನು ತಂದಿದ್ದಾರೆ. ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರ ಹೆಸರು, ದೇಶದ ಗೌರವಾನ್ವಿತ ಹೈಕೋರ್ಟ್, ಸುಪ್ರೀಂ ಕೋರ್ಟ್ ವಿಷಯವನ್ನೂ ತಂದಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತಹ ವಿಚಾರವಾಗಿದೆ. ಹೀಗಾಗಿ ಇದರ ಬಗ್ಗೆ ಸಮಗ್ರವಾದ ತನಿಖೆ ನಡೆದು ಈ ರೀತಿಯ ಸ್ವೇಚ್ಛಾಚಾರದ ಮಾತುಗಳು ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ವ್ಯಕ್ತಿಗಳಿಗೆ ಕಾನೂನು ವ್ಯಾಪ್ತಿಯೊಳಗೆ ತನಿಖೆ ಮುಖಾಂತರ ಅತ್ಯಾಸತ್ಯತೆ ಹೊರಗೆ ಬಂದು ಇದರಲ್ಲಿ ಯಾರಿದ್ದಾರೆ ಅವರಿಗೆ ಕಾನೂನು ವ್ಯಾಪ್ತಿಯೊಳಗೆ ಶಿಕ್ಷೆಗೆ ಒಳಪಡಿಸಲೇಬೇಕಾದಂತಹ ಅವಶ್ಯಕತೆ ಇದೆ ಎಂದರು. ಇದನ್ನೂ ಓದಿ: ಜೆಡಿಎಸ್ ಶಾಸಕನ ಪುತ್ರನಿಗೆ ಬಿಎಸ್‍ವೈಯಿಂದ ಮಂತ್ರಿಗಿರಿ ಆಫರ್ – ಆಡಿಯೋದಲ್ಲಿ ಏನಿದೆ?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv