ಮಂಗಳೂರು: ನಗರದ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಹಾಗೂ ಶ್ರೀಮಂತ ವ್ಯಕ್ತಿಗಳ ದರೋಡೆಗಾಗಿ ಸಂಚು ರೂಪಿಸುತ್ತಿದ್ದ ಕುಖ್ಯಾತ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2 ಪಿಸ್ತೂಲ್, ಸಜೀವ ಗುಂಡುಗಳು, ಚೂರಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ಮಾರುತಿ ಸ್ವಿಫ್ಟ್ ಕಾರು ಹಾಗೂ ರಿಕ್ಷಾವೊಂದರಲ್ಲಿ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಿಂದ ಇತ್ತೀಚೆಗೆ ಬಿಡುಗಡೆಗೊಂಡಿದ್ದವರು ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಸುರತ್ಕಲ್‍ನ ಸಫ್ವಾನ್, ಹುಸೈನ್, ಮೊಹಮ್ಮದ್ ಫೈಸಲ್, ಎಮ್ಮೆಕೆರೆಯ ಅಬ್ದುಲ್ ನಾಸಿರ್, ಮುಕ್ಕ ಸುರತ್ಕಲ್‍ನ ಸಂಶುದ್ದೀನ್, ಉಳ್ಳಾಲದ ಹಳೆಕೋಟೆಯ ಉಮ್ಮರ್ ಫಾರೂಕ್ ಹಾಗೂ ಮೊಹಮ್ಮದ್ ಅನ್ಸಾರ್ ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ 2 ಪಿಸ್ತೂಲ್‍ಗಳು, 7 ಸಜೀವ ಮದ್ದುಗುಂಡುಗಳು, 2 ಚೂರಿಗಳು, 3 ಮೊಬೈಲ್ ಫೋನ್ ಕೆಎ-19-ಎಂಇ-4009 ಮಾರುತಿ ಸ್ವಿಫ್ಟ್ ಕಾರು, ಕೆಎ-19-ಎಬಿ-6123 ಬಜಾಜ್ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ಈ ಆರೋಪಿಗಳ ಪೈಕಿ ಸಫ್ವಾನ್ ಹುಸೈನ್ ಎಂಬಾತನ ವಿರುದ್ಧ ಈ ಹಿಂದೆ ಕೊಲೆ, ಕೊಲೆಗೆ ಪ್ರಯತ್ನ, ಅಪಹರಣ, ದರೋಡೆ, ಕರ್ತವ್ಯನಿರತ ಪೆÇಲೀಸರ ಹಲ್ಲೆ ಮುಂತಾದ ಒಟ್ಟು 23 ಪ್ರಕರಣಗಳು ದಾಖಲಾಗಿದ್ದುದಲ್ಲದೇ ಗೂಂಡಾ ಕಾಯ್ದೆಯಡಿಯಲ್ಲಿ ಕೂಡಾ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಈತ 2 ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ.
Advertisement
ಮೊಹಮ್ಮದ್ ಫೈಸಲ್ ಇಬ್ರಾಹಿಂ ಶೇಖ್ ವಿರುದ್ಧ ಕೊಲೆಗೆ ಯತ್ನ, ದರೋಡೆ, ಜೈಲಿನಲ್ಲಿ ಗಲಾಟೆ ಮುಂತಾದ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗೆ ಜೈಲ್ ನಿಂದ ಬಿಡುಗಡೆಗೊಂಡಿದ್ದ. ಸಂಶುದ್ದೀನ್ ಎಂಬಾತನ ವಿರುದ್ಧ ಕೊಲೆ, ಕೊಲೆಗೆ ಯತ್ನ, ಅಪಹರಣ, ದರೋಡೆ, ಜೈಲಿನಲ್ಲಿ ಗಲಾಟೆ ಮುಂತಾದ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಸುಮಾರು 8 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದ.
Advertisement
ಅಬ್ದುಲ್ ನಾಸಿರ್ ಯಾನೆ ಡಾನ್ ನಾಸೀರ್ ಎಂಬಾತನ ವಿರುದ್ಧ ಕೊಲೆಯತ್ನ, ಅಪಹರಣ, ದರೋಡೆ, ಕೋಮು ಗಲಭೆ ಮುಂತಾದ ಒಟ್ಟು 9 ಪ್ರಕರಣಗಳು ದಾಖಲಾಗಿದೆ.
Advertisement
ಉಮರ್ ಫಾರೂಕ್ ಯಾನೆ ಮಾನಾ ಫಾರೂಕ್ ವಿರುದ್ದ ಮೂರು ಪ್ರಕರಣಗಳು ದಾಖಲಾಗಿದೆ. ಅವುಗಳ ಪೈಕಿ ಒಂದು ಕೊಲೆ ಯತ್ನ, ದರೋಡೆ ಯತ್ನ ಹಾಗೂ ಹಲ್ಲೆ ಪ್ರಕರಣವೂ ಇದೆ. ಮೊಹಮ್ಮದ್ ಅನ್ಸಾರ್ ನ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.