CrimeDakshina KannadaDistrictsKarnatakaLatestMain Post

ಉಗ್ರರ ಅಡಗುತಾಣವಾಗ್ತಿದ್ಯಾ ಮಂಗಳೂರು – ಕರಾವಳಿ ಜಿಲ್ಲೆಯಾದ್ಯಂತ ಹೈ ಅಲರ್ಟ್

ಮಂಗಳೂರು: ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಮೃದ್ಧವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಉಗ್ರರ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಾಡಾಗಿದೆ. ಜಲಮಾರ್ಗ, ವಾಯು ಮಾರ್ಗ, ರೈಲ್ವೇ ಬಳಸಿ ಉಗ್ರರು (Terrorist)  ವಿಧ್ವಂಸಕ ಕೃತ್ಯ ನಡೆಸಲು ಮಂಗಳೂರನ್ನು (Mangaluru) ಪ್ರಸಕ್ತ ಜಾಗ ಮಾಡಿಕೊಂಡಿದ್ದಾರೆ. ಬಂದರು ನಗರಿಯ ಮೇಲೆ ಉಗ್ರ ಚಟುವಟಿಕೆ ಕರಿನೆರಳು ಆವರಿಸಿಕೊಳ್ಳಲು ಒಂದು ಕಾರಣವಿದೆ.

ಕಡಲತಡಿ, ಬಂದರು ನಗರಿ ಪ್ರವಾಸೋದ್ಯಮದ ಜಿಲ್ಲೆ ಎಂಬ ಖ್ಯಾತಿ ಪಡೆದಿತ್ತು. ಏರ್‌ಪೋರ್ಟ್‌, ರೈಲು ಸಂಪರ್ಕ ಮತ್ತು ಬಂದರನ್ನು ಒಳಗೊಂಡಂತೆ ವಾಣಿಜ್ಯ ನಗರಿಯಾಗಿ ಮಂಗಳೂರು ಅಗಾಧವಾಗಿ ಬೆಳೆದಿತ್ತು. ಇಂತಹ ಮಂಗಳೂರಿಗೆ ಈಗ ಉಗ್ರರ ಕರಿ ನೆರಳು ಚಾಚಿದೆ. ಕಳೆದ ಹಲವಾರು ವರ್ಷಗಳಿಂದ ದೇಶದ್ರೋಹಿ ಚಟುವಟಿಕೆಗಳು ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಶುರುವಾಗಿದೆ. ಅರಬ್ಬಿ ಸಮುದ್ರದ ತಟದ ನಗರವನ್ನು ವಿದ್ವಂಸಕ ಕೃತ್ಯಗಳಿಗೆ ಬಳಸಲು ಶುರು ಮಾಡಿದ್ದಾರೆ. ಪಕ್ಕದಲ್ಲಿ ಕೇರಳ (Kerala) ರಾಜ್ಯ ಇರುವುದರಿಂದ ದುಷ್ಕೃತ್ಯಗಳನ್ನು ಕರ್ನಾಟಕದ ಗಡಿ ಜಿಲ್ಲೆಗೂ ವಿಸ್ತರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮ ಜಿಲ್ಲೆಯಾಗಿರುವ ಕಾರಣ ಇಲ್ಲಿ ವಿದ್ವಂಸಕ ಕೃತ್ಯಗಳಿಗೆ ಬೆಂಬಲದ ಜೊತೆ ಆರ್ಥಿಕ ಸಹಾಯ ಕೂಡ ಸಿಗುತ್ತಿದೆ. ಇದನ್ನೂ ಓದಿ: ಮಂಗ್ಳೂರು ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯ ದೇಹ 45% ಸುಟ್ಟಿದೆ – ಮಾತನಾಡುವ ಪರಿಸ್ಥಿತಿಯಲ್ಲಿಲ್ಲ: ಅಲೋಕ್ ಕುಮಾರ್

ಶೈಕ್ಷಣಿಕವಾಗಿ ಮುಂದಿರುವ ಬುದ್ಧಿವಂತರ ಜಿಲ್ಲೆಯನ್ನೇ ಟಾರ್ಗೆಟ್‌ ಮಾಡಿ ಉಗ್ರಗಾಮಿ ಚಟುವಟಿಕೆಗಳನ್ನು ಮಾಡುತ್ತಿರುವ ಟೆರರಿಸ್ಟ್‌ಗಳು ತಮ್ಮ ಎಲ್ಲಾ ಕೃತ್ಯಗಳನ್ನು ನಡೆಸಲು ಬೇಕಾದ ವಾತಾವರಣವನ್ನು ಮಂಗಳೂರಿನಲ್ಲಿ ನಿರ್ಮಾಣ ಮಾಡಿಕೊಂಡಿದ್ದಾರೆ. ಆರ್ಥಿಕ ಸಹಾಯದ ಜೊತೆ ಸೂಕ್ತ ಅಡಗು ತಾಣಗಳು ಕೂಡ ಉಗ್ರರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಗುತ್ತಿದೆ. ವಿಮಾನ, ರೈಲು, ರಸ್ತೆ ಮತ್ತು ಸಮುದ್ರ ಮೂಲಕ ಸುಲಭವಾಗಿ ತಮ್ಮ ದುಷ್ಟ ಚಟುವಟಿಕೆಗಳನ್ನು ಮಾಡಲು ಸುಲಭ ಮಾರ್ಗಗಳು ಸಿಗುತ್ತಿದೆ. ಇದೀಗ ಮಂಗಳೂರಿನಲ್ಲಿ ನಡೆದ ಮೊದಲ ಸ್ಫೋಟಕ್ಕೆ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ. ಉತ್ತರ ಭಾರತದ ನಗರಗಳಲ್ಲಿ ನಡೆಯುತ್ತಿದ್ದ ಬ್ಲಾಸ್ಟ್ ನಮ್ಮೂರಿಗೂ ವಕ್ಕರಿಸಿತಾ ಎಂಬ ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!

ಉಗ್ರರನ್ನು ಬೆಂಬಲಿಸಿ ಗೋಡೆ ಬರಹ, ಐಸಿಸ್ ಜೊತೆ ಲಿಂಕ್ ಇದೆ ಎಂಬ ಕಾರಣಕ್ಕೆ ಅನುಮಾನಾಸ್ಪದ ವ್ಯಕ್ತಿಗಳ ಬಂಧನ ವಿಚಾರಣೆ ನಡೆದು, ಮಂಗಳೂರು ಚರ್ಚೆಯಲ್ಲಿದೆ. ಮಂಗಳೂರಲ್ಲಿ ಸ್ಫೋಟ ನಡೆಯುತ್ತಿದ್ದಂತೆ ಕಮಿಷನರೇಟ್ ವ್ಯಾಪ್ತಿ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಅಲರ್ಟ್ ಘೋಷಿಸಿದ್ದಾರೆ. ದುಷ್ಕೃತ್ಯ ಮಾಡುವವರನ್ನು ಬುಡಸಮೇತ ಕಿತ್ತು ಹಾಕಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Live Tv

Leave a Reply

Your email address will not be published. Required fields are marked *

Back to top button