ಮಂಗ್ಳೂರು ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯ ದೇಹ 45% ಸುಟ್ಟಿದೆ – ಮಾತನಾಡುವ ಪರಿಸ್ಥಿತಿಯಲ್ಲಿಲ್ಲ: ಅಲೋಕ್ ಕುಮಾರ್

ಚಿಕ್ಕಬಳ್ಳಾಪುರ: ಮಂಗಳೂರಿನಲ್ಲಿ (Mangaluru) ರಿಕ್ಷಾದಲ್ಲಿ (AutoRickshaw) ಬ್ಲಾಸ್ಟ್ ಮಾಡಿದ ಆರೋಪಿಯ ಮುಖಕ್ಕೆ ಸುಟ್ಟ ಗಾಯವಾಗಿದೆ. 45% ದೇಹ ಸುಟ್ಟಿದೆ. ಮಾತನಾಡುವ ಪರಿಸ್ಥಿತಿಯಲ್ಲಿ ಗಾಯಾಳು ಆರೋಪಿ ಇಲ್ಲ ಎಂದು ಎಡಿಜಿಪಿ (ADGP) ಅಲೋಕ್ ಕುಮಾರ್ (Alok Kumar) ಮಾಹಿತಿ ನೀಡಿದ್ದಾರೆ.
ಕೆಐಎಬಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಸಂಜೆ 4:30ರ ಸುಮಾರಿಗೆ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಬೇರೆಡೆ ಹೋಗಿ ಬಾಂಬ್ ಬ್ಲಾಸ್ಟ್ ಮಾಡುವ ಉದ್ದೇಶ ಅವರದ್ದಾಗಿತ್ತು ಆದ್ರೆ ಆಕಸ್ಮಿಕವಾಗಿ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಈ ಪ್ರಕರಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದರ ಕುರಿತಾಗಿ ಸಾಕಷ್ಟು ಮಾಹಿತಿ ಸಿಕ್ಕಿದೆ. ಎಲ್ಲೆಲ್ಲಿ ಅವನ ಲಿಂಕ್ ಇತ್ತು ಅಲ್ಲೆಲ್ಲಾ ನಮ್ಮ ತಂಡ ಹೋಗಿದೆ. ಅವನ ಗುರುತು 100% ಖಚಿತ ಪಡಿಸಲಿಕ್ಕೆ ಅವರ ಸಂಬಂಧಿಕರನ್ನು ಕರೆದಿದ್ದೇವೆ. ಅವರು ಬಂದು ಗುರುತಿಸಿದ ನಂತರ ಯಾರು ಅಂತ ನಾವು ಖಚಿತಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ಬಾಂಬ್ ಸ್ಫೋಟದ ತನಿಖೆ NIA ಹೆಗಲಿಗೆ : ನಳಿನ್ ಕುಮಾರ್ ಕಟೀಲ್
ಇಂದು ರಾತ್ರಿ ಅಥವಾ ನಾಳೆವರೆಗೂ ವಿಚಾರಣೆ ಮುಂದುವರಿಯುತ್ತದೆ. ತರಾತುರಿಯಲ್ಲಿ ಈ ಬಗ್ಗೆ ನಾವು ಏನು ಹೇಳಲು ಆಗಲ್ಲ. 12 ರಿಂದ 15 ಗಂಟೆ ನಂತರ ಹೇಳ್ತೀವಿ. ಯಾವ ವಿಚಾರಕ್ಕೆ ಆಯ್ತು ಅನ್ನೂ ಬಗ್ಗೆ ನಾವು ಹೇಳಲು ಆಗಲ್ಲ. ನಮ್ಮ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಕೇಂದ್ರ ಅಧಿಕಾರಿಗಳ ಜೊತೆ ಸಂಪರ್ಕವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ತುಂಗಾ ನದಿಯಲ್ಲಿ ಸ್ಫೋಟ ಮಾಡಿ ಪರಾರಿಯಾದವನು ಮಂಗ್ಳೂರಲ್ಲಿ ಕುಕ್ಕರ್ ಬಾಂಬ್ ಸಿಡಿಸಿ ಸಿಕ್ಕಿಬಿದ್ದ
Live Tv