ಮಂಗಳೂರು: ಶಾರೀಕ್(Shariq) ಬಳಿ ಇದ್ದಿದ್ದು ಅಂತಿಂಥ ಕುಕ್ಕರ್ ಬಾಂಬ್(Cooker Bomb) ಅಲ್ಲ. ಆ ಕುಕ್ಕರ್ ಬಾಂಬ್‌ಗೆ ಇಡೀ ಬಸ್ಸನ್ನೇ(Bus) ಸ್ಪೋಟಿಸುವ ಶಕ್ತಿ ಇತ್ತು ಎಂಬ ಸ್ಫೋಟಕ ವಿಚಾರ ಈಗ ಲಭ್ಯವಾಗಿದೆ.
Advertisement
ಹೌದು. ರಿಕ್ಷಾದಲ್ಲಿ ಸ್ಫೋಟ(Mangaluru Cooker Bomb Blast Case) ನಡೆದ ಬಳಿಕ ಮಂಗಳೂರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ(FSL) ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಡೆಸಿದ ತಂಡ ಈ ಬಾಂಬ್ ಸಾಮರ್ಥ್ಯದ ಬಗ್ಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಇದನ್ನೂ ಓದಿ: ದೊಡ್ಡ ಅನಾಹುತ ತಪ್ಪಿಸಿದ್ದಕ್ಕೆ ದೇವರಿಗೆ ಧನ್ಯವಾದ: ADGP ಅಲೋಕ್ ಕುಮಾರ್
Advertisement
Advertisement
ಎಫ್‌ಎಸ್‌ಎಲ್ ತಂಡ ನೀಡಿದ ವರದಿಯಲ್ಲಿರುವ ಅಂಶಗಳ ಬಗ್ಗೆ ಪೊಲೀಸ್ ಮೂಲಗಳು ಪಬ್ಲಿಕ್ ಟಿವಿ ಮಾಹಿತಿ ನೀಡಿವೆ. 3 ಲೀಟರ್ ಕುಕ್ಕರ್ ಒಳಗಡೆ ಸ್ಪೋಟಕದ ಜೆಲ್ ಇತ್ತು. ಇದರ ಜೊತೆ ಒಂದು ಡಿಟೋನೇಟರ್, ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತು. ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಆಗಿದೆ. ಡಿಟೋನೇಟರ್‌ಗೆ ಪವರ್ ಹೋಗದೇ ಕೇವಲ ಜೆಲ್‌ಗೆ ಮಾತ್ರ ಬೆಂಕಿ ತಗುಲಿದೆ. ಜೆಲ್ ಹೊತ್ತಿಕೊಂಡು ಉರಿದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿ ದಟ್ಟವಾದ ಹೊಗೆ ಬಂದಿದೆ. ಇದನ್ನೂ ಓದಿ: ವಾಟ್ಸಪ್ ಡಿಪಿಯಲ್ಲಿ ಈಶ್ವರನ ಫೋಟೋ ಹಾಕಿದ್ದ ಉಗ್ರ ಶಾರೀಕ್
Advertisement
ಡಿಟೋನೇಟರ್ ಮತ್ತು ಜೆಲ್ ಎರಡಕ್ಕೇ ಏಕಕಾಲದಲ್ಲಿ ಬೆಂಕಿ ತಗುಲಿದ್ದರೆ ಊಹಿಸಲಾಗದ ಪ್ರಮಾಣದ ಅನಾಹುತ ಸಂಭವಿಸುತ್ತಿತ್ತು. ಒಂದು ವೇಳೆ ಸರಿಯಾಗಿ ಸ್ಫೋಟವಾಗಿದ್ದರೆ ರಿಕ್ಷಾ ರಿಕ್ಷಾವಾಗಿ ಇರುತ್ತಿರಲಿಲ್ಲ. ಸುತ್ತಮುತ್ತಲಿನ ವಾಹನಗಳು ಜಖಂ ಆಗಿ ಬಹಳ ಸಾವು ನೋವು ಸಂಭವಿಸುತ್ತಿತ್ತು. ಒಂದು ಬಸ್ ಅನ್ನೇ ಸ್ಫೋಟಿಸುವ ಸಾಮರ್ಥ್ಯ ಆ ಕುಕ್ಕರ್ ಬಾಂಬ್‌ಗೆ ಇತ್ತು ಎಂಬ ವಿಚಾರವನ್ನು ಎಫ್‌ಎಸ್‌ಲ್ ಉಲ್ಲೇಖಿಸಿದೆ ಎಂದು ಮೂಲಗಳು ತಿಳಿಸಿವೆ.