ಮಂಗಳೂರು: ಸಿಬಿಎಸ್ಇ ಬೋರ್ಡ್ ಹಾಗೂ ಜೈನ್ ಹೆರಿಟೇಜ್ ಸ್ಕೂಲ್ ಆಯೋಜಿಸಿದ ಸೌತ್ ಝೋನ್ ಸ್ಕೇಟಿಂಗ್ ಚಾಂಪಿಯನ್‍ಶಿಪ್- 2019ರಲ್ಲಿ ಮಂಗಳೂರಿನ ಅನಘಾ ಎರಡು ಕಂಚಿನ ಪದಕ ಪಡೆದಿದ್ದಾರೆ.
ಬೆಳಗಾವಿಯ ಶಿವಗಂಗಾ ಸ್ಕೇಟಿಂಗ್ ರಿಂಕ್‍ನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಗೋವಾ ರಾಜ್ಯಗಳ ಸೌತ್ ಝೋನ್ ಚಾಂಪಿಯನ್‍ಶಿಪ್ ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ 10 ವರ್ಷದೊಳಗಿನ ಬಾಲಕಿಯರ ವಿಭಾಗದ 500 ಹಾಗೂ 1,000 ಮೀಟರ್ ರಿಂಕ್ ರೇಸ್‍ನಲ್ಲಿ ಅನಘಾ ತಲಾ ಎರಡು ಕಂಚಿನ ಪದಕ ಪಡೆದಿದ್ದಾರೆ.ಇದನ್ನೂ ಓದಿ:ರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್: ಮಂಗಳೂರಿನ ಅನಘಾಗೆ ಬೆಳ್ಳಿ ಪದಕ
ಮಂಗಳೂರಿನ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ, ಬಿಜೈ ಲೂಡ್ಸ್ ಸೆಂಟ್ರಲ್ ಸ್ಕೂಲ್‍ನಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ನ ಸದಸ್ಯೆಯಾಗಿರುವ ಅನಘಾ ತರಬೇತುದಾರರಾದ ಮೋಹನ್ ದಾಸ್. ಕೆ ಹಾಗೂ ಜಯರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.