ಗುಣಮಟ್ಟದ ಜೀವನಕ್ಕೆ ಏಷ್ಯಾದಲ್ಲೇ ಮಂಗಳೂರು ನಂಬರ್ ಒನ್, ವಿಶ್ವದಲ್ಲಿ 7ನೇ ಸ್ಥಾನ

Public TV
1 Min Read
mangaluru

ಬೆಂಗಳೂರು: ಗುಣಮಟ್ಟದ ಜೀವನಕ್ಕೆ ಮಂಗಳೂರು ಏಷ್ಯಾದಲ್ಲೇ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

ಹೌದು. ನಂಬಿಯೋ(numbeo) ಕ್ವಾಲಿಟಿ ಆಫ್ ಲೈಫ್ ಇಂಡೆಕ್ಸ್ ವರದಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ವಿಶ್ವದಲ್ಲೇ ಮಂಗಳೂರಿಗೆ ಏಳನೇ ಸ್ಥಾನ ಸಿಕ್ಕಿದೆ. ಒಟ್ಟು 189 ನಗರಗಳನ್ನು ಪರಿಗಣಿಸಿ ಈ ಶ್ರೇಯಾಂಕ ನೀಡಿದ್ದು, ಟಾಪ್ 15 ಮಹಾನಗರಗಳ ಪಟ್ಟಿಯಲ್ಲಿ ಭಾರತದ ಪೈಕಿ ಮಂಗಳೂರಿಗೆ ಮಾತ್ರ ಸ್ಥಾನ ಸಿಕ್ಕಿದೆ.

ವಿಶ್ವದಲ್ಲೇ ಭಾರತದ ನಗರಗಳಿಗೆ ಎಷ್ಟನೇ ಸ್ಥಾನ?
ಮಂಗಳೂರಿಗೆ 7ನೇ ಸ್ಥಾನ ಸಿಕ್ಕಿದರೆ, ಪುಣೆಗೆ 122ನೇ ಸ್ಥಾನ, ಹೈದರಾಬಾದ್‍ಗೆ 129, ಬೆಂಗಳೂರಿಗೆ 131, ಕೊಯಂಬತ್ತೂರು 134, ಗುರ್‍ಗಾಂವ್ 145, ಅಹಮದಾಬಾದ್ 148, ಚೆನ್ನೈ 149ನೇ ಸ್ಥಾನ ಸಿಕ್ಕಿದೆ. ದೆಹಲಿಗೆ 173ನೇ ಸ್ಥಾನ ಸಿಕ್ಕಿದರೆ, ಕೋಲ್ಕತ್ತಾ 177, ಮುಂಬೈಗೆ 181ನೇ ಸ್ಥಾನ ಸಿಕ್ಕಿದೆ.

ವಿಶ್ವದ ಪಟ್ಟಿಯಲ್ಲಿ ನ್ಯೂಜಿಲೆಂಡಿನ ರಾಜಧಾನಿ ವೆಲ್ಲಿಂಗ್ಟನ್‍ಗೆ ಮೊದಲ ಸ್ಥಾನ ಸಿಕ್ಕಿದರೆ ಆಸ್ಟೇಲಿಯಾದ ರಾಜಧಾನಿ ಕ್ಯಾನ್‍ಬೆರಾಗೆ ಎರಡನೇ ಸ್ಥಾನ ಸಿಕ್ಕಿದೆ. ವಿಶೇಷ ಏನೆಂದರೆ ಟಾಪ್ 10 ಮಹಾನಗರಗಳ ಪಟ್ಟಿಯಲ್ಲಿ ಏಷ್ಯಾ ಖಂಡದ ಮಹಾನಗರಗಳ ಪೈಕಿ ಮಂಗಳೂರಿಗೆ ಮಾತ್ರ ಸ್ಥಾನ ಸಿಕ್ಕಿದೆ.

ಏಷ್ಯಾ ಖಂಡದಲ್ಲಿ ಮೊದಲ ಸ್ಥಾನ ಮಂಗಳೂರಿಗೆ ಸಿಕ್ಕಿದರೆ ಟರ್ಕಿಯ ಬುರ್ಸಾಗೆ ಎರಡನೇ ಸ್ಥಾನ ಸಿಕ್ಕಿದೆ. ಪಟ್ಟಿಯಲ್ಲಿ ಪುಣೆಗೆ 15ನೇ ಸ್ಥಾನ ಸಿಕ್ಕಿದೆ.

ಸುರಕ್ಷೆ, ಆರೋಗ್ಯ, ಜೀವನ ವೆಚ್ಚ, ಟ್ರಾಫಿಕ್, ಮಾಲಿನ್ಯ, ಹವಾಮಾನ ಇತ್ಯಾದಿ ಮಾನದಂಡಗಳನ್ನು ಆಧರಿಸಿ ಮಹಾನಗರಗಳಿಗೆ ಶ್ರೇಯಾಂಕ ಪಟ್ಟಿಯನ್ನು ನೀಡಲಾಗಿದೆ.

ಹೀಗಾಗಿ ಇಲ್ಲಿ ವಿಶ್ವದ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಮಹಾನಗರಗಳು ಎಷ್ಟನೇ ಸ್ಥಾನ ಪಡೆದಿದೆ? ಏಷ್ಯಾ ಖಂಡದಲ್ಲಿ ಯಾವ ನಗರಗಳು ಟಾಪ್ 15ರ ಸ್ಥಾನವನ್ನು ಪಡೆದುಕೊಂಡಿದೆ? ಭಾರತದದಲ್ಲಿ ಯಾವ ನಗರಕ್ಕೆ ಎಷ್ಟನೇ ಸ್ಥಾನ ಎನ್ನುವ ಮಾಹಿತಿಯನ್ನು ನೀಡಲಾಗಿದೆ.

 

world list

india other city 1

india other city 2

india other city 3

ಏಷ್ಯಾ ಖಂಡದ ಟಾಪ್ 15 ಮಹಾನಗರಗಳು

asia top 15

ಭಾರತದ ಟಾಪ್ 11 ಮಹಾನಗರಗಳು

india list

 

 

Share This Article
Leave a Comment

Leave a Reply

Your email address will not be published. Required fields are marked *