ಭಾರತೀಯ ಸಂಸ್ಕೃತಿಯಲ್ಲಿ ಮಂಗಳಸೂತ್ರಕ್ಕೆ ಆದರದೇ ಆದ ಪ್ರಾಮುಖ್ಯತೆ ಇದೆ. ಮಾಂಗಲ್ಯವನ್ನು ಮದುವೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮದುವೆಯ ನಂತರ ಸಾಮಾನ್ಯವಾಗಿ ಪ್ರತಿ ಮಹಿಳೆಯು ಕುತ್ತಿಗೆಯಲ್ಲಿ ಸರದಂತಿರುವ ಮಂಗಳಸೂತ್ರವನ್ನು ಧರಿಸಿರುವುದನ್ನು ನೀವು ನೋಡುರುತ್ತೀರಿ. ಆದರೆ ಅನೇಕ ಮಹಿಳೆಯರು ಮಂಗಳಸೂತ್ರವನ್ನು ಧರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮಂಗಳಸೂತ್ರದ ಸಾಂಪ್ರದಾಯಿಕ ವಿನ್ಯಾಸಗಳು ಅವರ ಸೊಗಸಾದ ನೋಟಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುವುದು ಅವರ ನಂಬಿಕೆ. ಮದುವೆಯ ನಂತರ ಪ್ರತಿಯೊಬ್ಬ ಮಹಿಳೆಯೂ ಮಂಗಳಸೂತ್ರವನ್ನು ಧರಿಸಲು ಇಷ್ಟಪಡುತ್ತಾರೆ. ಹಾಗಾಗಿಯೇ ಈಗ ಮಾರುಕಟ್ಟೆಗೆ ಹಲವಾರು ಡಿಸೈನ್‍ನ ಕೈ ಮಂಗಳಸೂತ್ರಗಳು ಬಂದಿವೆ. ಈ ಮಂಗಳ ಸೂತ್ರಗಳನ್ನು ನೀವು ಕೈಯಲ್ಲಿ ಧರಿಸಬಹುದಾಗಿದೆ.
Advertisement
Advertisement
ಹಿಂದಿನ ಕಾಲದಲ್ಲಿ ಮಹಿಳೆಯರು ಕರಿಮಣಿ ಸರವನ್ನು ಕೊರಳಿನಲ್ಲಿ ಮಾತ್ರ ಧರಿಸುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ. ಕೊರಳಿನಲ್ಲಿ ಮಾಂಗಲ್ಯಸೂತ್ರವನ್ನು ಧರಿಸಲು ಸಾಧ್ಯವಾಗದೇ ಇರುವವರು ಕೈಯಲ್ಲಿ ಧರಿಸಲು ಆರಂಭಿಸಿದ್ದಾರೆ. ಇದೀಗ ಬ್ರಾಸ್ಲೈಟ್ ಮಾದರಿಯ ವಿನೂತನ ಕೈ ಮಂಗಳ ಸೂತ್ರ ಡಿಸೈನ್ ಕುರಿತಂತೆ ಕೆಲವೊಂದಷ್ಟು ಮಾಹಿತಿ ಕೆಳಗಿನಂತಿದೆ. ಇದನ್ನೂ ಓದಿ: ನನ್ನ ತಲೆ ಕೆಡಿಸಿ, ಡಿವೋರ್ಸ್ ಕೊಡಿಸಿ ಮೋಸ ಮಾಡಿದ್ದಾನೆ- ಚಿಕ್ಕಬಳ್ಳಾಪುರದಲ್ಲಿ `ಪವಿತ್ರಾ ಮ್ಯಾರೇಜ್ ಸ್ಟೋರಿ’
Advertisement
Advertisement
ಗಂಡನ ರಾಶಿ ಚಕ್ರ ಚಿಹ್ನೆ ಮಂಗಳಸೂತ್ರ
ನೀವು ಜ್ಯೋತಿಷ್ಯವನ್ನು ನಂಬುವವರಾಗಿದ್ದರೆ, ನಿಮ್ಮ ಗಂಡನ ರಾಶಿಚಕ್ರ ಚಿಹ್ನೆ ಅಥವಾ ಅದೃಷ್ಟ ಸಂಖ್ಯೆ ವಿನ್ಯಾಸದೊಂದಿಗೆ ಮಾಡಿರುವ ಮಂಗಳಸೂತ್ರವನ್ನು ಧರಿಸಬಹುದು. ಈ ಮಂಗಳಸೂತ್ರ ಡಿಸೈನ್‍ನಲ್ಲಿ ವಿವಿಧ ರೀತಿಯ ರಾಶಿ ಚಿಹ್ನೆಗಳನ್ನು ಕಾಣಬಹುದಾಗಿದೆ. ನೀವು ಆ ಚಿಹ್ನೆಯ ಪೆಂಡೆಂಟ್ ಅನ್ನು ಮಾಡಬಹುದು ಇದಲ್ಲದೇ ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಮಂಗಳಸೂತ್ರದ ಪೆಂಡೆಂಟ್‍ನ ಬಣ್ಣವನ್ನು ಸಹ ನೀವೇ ನಿರ್ಧರಿಸಬಹುದು.
ಗಂಡನ ಹೆಸರಿನ ಮಂಗಳಸೂತ್ರ
ನೀವು ನಿಮ್ಮ ಗಂಡನ ಹೆಸರನ್ನು ಸೊಗಸಾದ ಫಾಂಟ್‍ನಲ್ಲಿ ಕಸ್ಟಮೈಸ್ ಮಾಡಬಹುದು ಮತ್ತು ಅವರ ಪೆಂಡೆಂಟ್ ಅನ್ನು ಮಂಗಳಸೂತ್ರದಲ್ಲಿ ತಯಾರಿಸಬಹುದು. ಗಂಡನ ಹೆಸರು ತುಂಬಾ ದೊಡ್ಡದಾಗಿದ್ದರೆ, ನೀವು ಅವರ ಹೆಸರಿನ ಮೊದಲ ಅಕ್ಷರದಿಂದ ಮಾಡಿದ ಪೆಂಡೆಂಟ್ ಅನ್ನು ಪಡೆಯಬಹುದು. ಇಷ್ಟೇ ಅಲ್ಲದೇ ನಿಮ್ಮ ಮತ್ತು ನಿಮ್ಮ ಗಂಡನ ಹೆಸರಿನಲ್ಲಿ ಸಂಯೋಜಿತ ಪೆಂಡೆಂಟ್ ಸಹ ನೀವು ಮಾಡಿಸಬಹುದು. ಒಂದು ವೇಳೆ ನಿಮ್ಮ ಗಂಡನ ಹೆಸರನ್ನು ಬರೆಸಲು ಇಷ್ಟಪಡದಿದ್ದರೆ, ನಿಮ್ಮ ಗಂಡನ ಯಾವುದೇ ನೆಚ್ಚಿನ ಹೆಸರನ್ನು ಪೆಂಡೆಂಟ್ ಆಗಿ ಮಾಡಿಸಬಹುದು. ಇದನ್ನೂ ಓದಿ: ಸಮ್ಮತಿಯ ಸೆಕ್ಸ್‌ನಿಂದ ಅವಿವಾಹಿತೆ ಗರ್ಭಧಾರಣೆ – 20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ: ಹೈಕೋರ್ಟ್
ಡಿಸೈನರ್ ಮಂಗಳಸೂತ್ರ
ಕೈ ಮಂಗಳಸೂತ್ರದಲ್ಲಿ ನೀವು ಹಲವಾರು ಡಿಸೈನರ್ ಮಂಗಳಸೂತ್ರ ಇರುವುದನ್ನು ಕಾಣಬಹುದು. ಬಹು-ಸರಪಳಿ ಮಂಗಳಸೂತ್ರ ಅಥವಾ ಟಸೆಲ್ ಮಂಗಳಸೂತ್ರದ ಜೊತೆಗೆ ನೀವು ಕಂಕಣ ಶೈಲಿಯ ಮಂಗಳಸೂತ್ರವನ್ನು ಸಹ ಕಾಣಬಹುದು. ಅಲ್ಲದೇ ಮಂಗಳಸೂತ್ರದಲ್ಲಿನ ಅನೇಕ ಪವಿತ್ರ ಪದಗಳು ಮತ್ತು ಚಿಹ್ನೆಗಳ ಹೊರತಾಗಿ, ನಿಮ್ಮ ಮದುವೆಯ ದಿನಾಂಕವನ್ನು ಪೆಂಡೆಂಟ್ ಆಗಿ ಪಡೆಯಬಹುದು. ಈ ರೀತಿಯ ಮಂಗಳಸೂತ್ರಗಳು ಅತ್ಯಂತ ವಿಶಿಷ್ಟವಾಗಿ ಕಾಣುತ್ತದೆ.