ನಮ್ಮೂರಿಗೆ ರಸ್ತೆಯಿಲ್ಲ, ನೀರು ಕೊಟ್ಟಿಲ್ಲ, ಈಗ್ಯಾಕೆ ಬಂದ್ರಿ-ಗ್ರಾಮಸ್ಥರಿಂದ ಶಾಸಕರಿಗೆ ಫುಲ್ ಕ್ಲಾಸ್
ಮಂಡ್ಯ: ಜೆಡಿಎಸ್‍ನ ಬಂಡಾಯ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರಿಗೆ ಮೇಳಾಪುರ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಮಂಡ್ಯ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾಗಿರುವ ಬಂಡಿಸಿದ್ದೇಗೌಡ ಅವರು ಕಳೆದ ಸೆಪ್ಟಂಬರ್ 9ರಂದು ಮೇಳಾಪುರ ಗ್ರಾಮಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಶಾಸಕರ ಕಾರನ್ನು ತಡೆದು ಊರಿನಲ್ಲಿ ರಸ್ತೆ ಹಾಗೂ ಶುದ್ಧ ಕುಡಿಯುವ ನೀರಿಗೆ ತೊಂದರೆಯಿದೆ. ಇದನ್ನು ಸರಿಪಡಿಸಲಾಗದೆ ನೀವು ಯಾಕೆ ನಮ್ಮ ಯೂರಿಗೆ ಬಂದಿದ್ದೀರಿ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Advertisement
Advertisement
ನಮ್ಮೂರಿನ ರಸ್ತೆಯಲ್ಲಿ ವಯಸ್ಸಾದವರನ್ನು ಕೆರದುಕೊಂಡು ಹೋಗಲು ಆಗುತ್ತಿಲ್ಲ. ಇತ್ತೀಚೆಗೆ ಮೂವರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹಬ್ಬಕ್ಕಾಗಿ ಬೇರೆ ಊರಿನಿಂದ ನಮ್ಮೂರಿಗೆ ಬರುವವರು ನಮ್ಮ ಊರನ್ನು ಬೈದುಕೊಂಡು ಹೋಗುತ್ತಾರೆ. ಇದನ್ನು ಸರಿಪಡಿಸದ ನೀವು ಈಗ ಯಾಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕರು ಸರಿಪಡಿಸಿಕೊಡುವುದಾಗಿ ಕ್ಷಮೆ ಕೇಳಿದ್ದಾರೆ. ಆದರೆ ಗ್ರಾಮಸ್ಥರು ಬಂದಾಗೆಲ್ಲಾ ಕ್ಷಮೆ ಕೇಳಿಕೊಂಡು ಹೋಗ್ತೀರಿ ಎಂದು ಮತ್ತೆ ಅವರ ಮೇಲೆ ಹರಿಯಾಯ್ದಿದ್ದಾರೆ.
Advertisement
ಕೊನೆಗೆ ಅಲ್ಲಿದ್ದ ಸ್ಥಳೀಯರೇ ಆಕ್ರೋಶಗೊಂಡ ಜನರನ್ನು ಸಮಾಧಾನ ಮಾಡಿ, ಶಾಸಕರನ್ನು ಕಳುಹಿಸಿ ಕೊಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರಿಯಾಗಿ ಕೆಲಸ ಮಾಡದೆ ಇರುವ ಎಲ್ಲಾ ರಾಜಕಾರಣಿಗಳಿಗೂ ಇದೇ ಪರಿಸ್ಥಿತಿ ಬರುತ್ತದೆ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.
https://www.youtube.com/watch?v=KYhkBK4-I1E