– ಜಂಗ್ಲಿ ಟೈಟಲ್‍ಗಾಗಿ 100 ಬಾರಿ ಸಿನಿಮಾ ನೋಡಿದ್ದ ರೌಡಿ
ಮಂಡ್ಯ: ಜಂಗ್ಲಿ ಟೈಟಲ್‍ಗಾಗಿ ಮಂಡ್ಯದ ರೌಡಿಶೀಟರ್ ಒಬ್ಬ ‘ಜಂಗ್ಲಿ’ ಸಿನಿಮಾವನ್ನು 100 ಬಾರಿ ವೀಕ್ಷಣೆ ಮಾಡಿರುವ ಸಂಗತಿ ಪೊಲೀಸರು ಮಾಡಿದ ರೌಡಿ ಶೀಟರ್‌ಗಳ ಪೆರೇಡ್‍ನಲ್ಲಿ ತಿಳಿದು ಬಂದಿದೆ.
ರೌಡಿ ಶೀಟರ್ ಶೇಖರ್ 100 ಬಾರಿ ‘ಜಂಗ್ಲಿ’ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾನೆ. ಇಂದು ಮಂಡ್ಯದ ಪೊಲೀಸ್ ಕವಾಯತು ಮೈದಾನದಲ್ಲಿ ರೌಡಿ ಶೀಟರ್‌ಗಳ ಪೆರೇಡ್ ನಡೆದಿದೆ. ಈ ಹಿಂದೆ ಯಾರೋ ಜಂಗ್ಲಿ ಎಂದು ಕರೆದಿದ್ದಕ್ಕೆ ‘ಜಂಗ್ಲಿ ಅಣ್ಣ’ ಅಂತ ಕರಿ ಎಂದು ಹಲ್ಲೆ ಮಾಡಿದ್ದನು. ಅದಕ್ಕೆ ಇಂದು ಪೆರೇಡ್‍ನಲ್ಲಿ ನಿಂಗೆ ಯಾರೋ ಟೈಟಲ್ ನೀಡಿದ್ದು ಎಂದು ಎಸ್‍ಪಿ ಕೇಳಿದ್ದಾರೆ.
Advertisement
Advertisement
ಆಗ ಜಂಗ್ಲಿ ಶೇಖರ್, ನಾನು ಜಂಗ್ಲಿ ಸಿನಿಮಾವನ್ನು ನೂರು ಬಾರಿ ನೋಡಿದ್ದೇನೆ. ಅದಕ್ಕೆ ಎಲ್ಲರೂ ಜಂಗ್ಲಿ ಎಂದು ಕರೆಯುತ್ತಾರೆ ಎಂದು ಎಸ್‍ಪಿ ಪರಶುರಾಮ್ ಅವರಿಗೆ ಹೇಳಿದ್ದಾನೆ. ನಂತರ ಎಸ್‍ಪಿ ಅವರು, ನಿನ್ನ ಅಣ್ಣ ಎಂದು ಕರೀಬೇಕಾ. ಡಾ.ರಾಜ್‍ಕುಮಾರ್ ಅವರು ಇದ್ದರು. ಅವರು ನನ್ನ ಅಣ್ಣ ಎಂದು ಕರೀರಿ ಅಂತಾ ಯಾರಿಗೂ ಹೇಳಲಿಲ್ಲ. ಆದರೆ ಜನರು ಅವರನ್ನು ಈಗಲೂ ಅಣ್ಣಾವ್ರು ಎಂದೇ ಕರೆಯುತ್ತಾರೆ. ಅಣ್ಣಾವ್ರ ಹಾಗೆ ಬೆಳೆಯಬೇಕು ಅದನ್ನು ಬಿಟ್ಟು ಹೀಗೆ ಹೆದರಿಸುವುದು ಅಲ್ಲ, ಇನ್ನೊಂದು ಸಾರಿ ಹೀಗೆ ಮಾಡಿದ್ದು ತಿಳಿದರೆ ಬಾಲ ಕಟ್ ಮಾಡುತ್ತೇನೆ ಎಂದು ರೌಡಿಶೀಟರ್ ಶೇಖರ್‌ಗೆ ಎಸ್‍ಪಿ ವಾರ್ನಿಂಗ್ ಕೊಟ್ಟಿದ್ದಾರೆ.
Advertisement
ರೌಡಿ ಪೆರೇಡ್‍ಗೆ ಬಂದಿದ್ದ ಮತ್ತೊಬ್ಬ ರೌಡಿ ಶೀಟರ್ ಬಸವನಿಗೂ ಎಸ್‍ಪಿ ಕ್ಲಾಸ್ ತೆಗೆದುಕೊಂಡರು. ಬಸವ ಮುಖದ ಶೈನಿಂಗ್‍ಗಾಗಿ ಕ್ರೀಮ್‍ವೊಂದನ್ನು ಹಾಕಿರುವ ಪರಿಣಾಮ ಮುಖ ಕೆಂಪಾಗಿ ಕಾಣುತ್ತಿತ್ತು. ಇದಕ್ಕೆ ಎಸ್‍ಪಿ ಪರಶುರಾಮ್ ಅವರು ಯಾಕೋ ಮುಖ ಇಷ್ಟೊಂದು ಕೆಂಪಾಗಿದೆ ಎಂದು ಕೇಳಿದ್ದಾರೆ. ಅದಕ್ಕೆ ಶೈನಿಂಗ್ ಕ್ರೀಮ್ ಹಾಕಿದ್ದೇನೆ ಎಂದು ಬಸವ ಹೇಳಿದ. ವೈಟ್ ಆಗಲು ಹೋಗಿ ರೆಡ್ ಆಗಿದಿಯಲ್ಲೋ, ಎಲ್ಲರೂ ಇವನು ಹಚ್ಚುವ ಕ್ರೀಮ್ ಹಚ್ಚಿ ಕೆಂಪಾಗಿ ಕಾಣುತ್ತೀರಾ ಎಂದು ಎಸ್‍ಪಿ ಗೇಲಿ ಮಾಡಿದರು.
Advertisement
ಇಂದು ನಡೆದ ಮಂಡ್ಯ ರೌಡಿ ಶೀಟರ್‌ಗಳ ಪೈಕಿ 200 ಮಂದಿ ರೌಡಿಗಳು ಹಾಜರಿದ್ದರು. ಬಂದ ಎಲ್ಲಾ ರೌಡಿಗಳಿಗೂ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರು ಖಡಕ್ ವಾರ್ನಿಂಗ್ ನೀಡಿ ಎಲ್ಲಾ ರೌಡಿ ಚುಟುವಟಿಕೆಗಳನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದರು. ಪೆರೇಡ್‍ಗೆ ಬಂದ 200 ರೌಡಿ ಶೀಟರ್‌ಗಳ ಪೈಕಿ 20 ಮಂದಿಯ ಉತ್ತಮ ನಡತೆಯನ್ನು ಗಮನಿಸಿ ರೌಡಿ ಶೀಟರ್ ನಿಂದ ಕೈ ಬಿಡಲಾಯಿತು.