ಮಂಡ್ಯ: ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ವೀವ್ಸ್‌ಗಾಗಿ ದೆವ್ವದ (Ghost) ಫೇಕ್ ವಿಡಿಯೋ ಹಂಚಿಕೊಂಡಿದಾತನಿಗೆ ಮಂಡ್ಯ ಪೊಲೀಸರು (Mandya Police) ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು, ನಾಗಮಂಗಲದಲ್ಲಿ ಬೈಕ್ ಸವಾರನಿಗೆ ಕಾಣಿಸಿಕೊಂಡ ದೆವ್ವದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ನೋಡಿ ಆ ರಸ್ತೆಯಲ್ಲಿ ದೆವ್ವ ಇದೆ ಎಂದು ಜನರು ಓಡಾಡಲು ಹೆದರುತ್ತಿದ್ದರು. ಈ ಬಗ್ಗೆ ಮಂಡ್ಯ ಪೊಲೀಸರು ಫ್ಯಾಕ್ಟ್‌ಚೆಕ್ ನಡೆಸಿದ್ದು, ಬಳಿಕ ವಿಡಿಯೋದ ಅಸಲಿಯತ್ತು ಬಯಲಾಗಿದೆ. ಇದನ್ನೂ ಓದಿ: ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!
ನಾಗಮಂಗಲ ಟೌನ್ ನಿವಾಸಿಯಾಗಿರುವ ಗೋಪಿಯು ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ ಪ್ರೇತಾತ್ಮ ಎಂಬ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ. ವಿಡಿಯೋ ಅಸಲಿಯತ್ತು ತಿಳಿಯಲು ನಾಗಮಂಗಲ ಪೊಲೀಸರು ಫ್ಯಾಕ್ಟ್‌ಚೆಕ್ ಮಾಡಿದ್ದರು. ಈ ವೇಳೆ ಗೋಪಿಯು ಲೈಕ್ಸ್, ವೀವ್ಸ್‌ಗಾಗಿ ಫೇಕ್ ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಇದೀಗ ಪೊಲೀಸರು ಯುವಕನ ತಪ್ಪೊಪ್ಪಿಗೆಯ ವಿಡಿಯೋ ಪೋಸ್ಟ್ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಫೇಕ್ ವಿಡಿಯೋಗಳನ್ನು ನಂಬಿ ಭಯಬೀಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.