ಮಂಡ್ಯ: ವಿದ್ಯುತ್ ಬಿಲ್ (Electricity Bill) ಏರಿಕೆಯಾಗಿದೆ ಎಂದು ರಾಜ್ಯದ ಹಲವು ಕಡೆ ಜನರು ಪ್ರತಿಭಟನೆ ನಡೆಸುತ್ತಿದ್ದರೆ ಮಂಡ್ಯ ನಗರದಲ್ಲಿ (Mandya) ಇನ್ನೂ ವಿದ್ಯುತ್ ಬಿಲ್ ಜನರ ಕೈ ಸೇರಿಲ್ಲ.
ಸಾಧಾರಣ ರಾಜ್ಯದೆಲ್ಲಡೆ ಪ್ರತಿ ತಿಂಗಳ ಮೊದಲ ವಾರ ಮೀಟರ್ ರೀಡರ್ ಮನೆಗೆ ಬಂದು ಲೆಕ್ಕ ಹಾಕಿ ಬಿಲ್ ನೀಡುತ್ತಾರೆ. ಆದರೆ ಈ ಬಾರಿ ಜೂನ್ 14 ಆದರೂ ಮೀಟರ್ ರೀಡರ್ ಮನೆ ಬಂದಿಲ್ಲ. ಇದನ್ನೂ ಓದಿ: ಪ್ರಿಯಕರನಿಗೋಸ್ಕರ ಪತಿಯನ್ನೇ ಮುಗಿಸಿದ ಖತರ್ನಾಕ್ ಲೇಡಿ – ಕೊನೆಗೇನಾಯ್ತು ನೋಡಿ
Advertisement
Advertisement
ಅರ್ಧ ತಿಂಗಳು ಕಳೆದ ಬೆನ್ನಲ್ಲೇ ಜನರು ಈಗ ಗೊಂದಲಕ್ಕೆ ಒಳಗಾಗಿದ್ದಾರೆ. ವಿದ್ಯುತ್ ಬಿಲ್ ಜಾಸ್ತಿ ಮಾಡಲು ಚೆಸ್ಕಾಂ (CHESCOM) ಮುಂದಾಗಿದ್ಯಾ ಎಂದು ಜನ ಪ್ರಶ್ನಿಸುತ್ತಿದ್ದಾರೆ.
Advertisement
ಈ ಬಗ್ಗೆ ಚೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಶೀಘ್ರವೇ ಬಿಲ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಬಿಲ್ ಇನ್ನೂ ಯಾಕೆ ಬಂದಿಲ್ಲ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಕ್ಕಿಲ್ಲ.
Advertisement
ಮಂಡ್ಯ ಮಾತ್ರವಲ್ಲ ರಾಜ್ಯದ ಹಲವು ಭಾಗಗಳಲ್ಲಿ ಈ ಬಾರಿ ವಿದ್ಯುತ್ ಬಿಲ್ ಮನೆ ಮಾಲೀಕರಿಗೆ ಸಿಕ್ಕಿಲ್ಲ.