ಮಂಡ್ಯ: ಸೌಂದರ್ಯ ಸ್ಪರ್ಧೆ ಅಂದ್ರೆ ಅದು ಕೇವಲ ಯುವತಿಯರಿಗೆ ಮಾತ್ರ ಸೀಮಿತ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಸಕ್ಕರೆ ನಗರಿ ಮಂಡ್ಯದಲ್ಲಿ ಸೌಂದರ್ಯ ಸ್ಪರ್ಧೆಗೆ ವಯಸ್ಸಿನ ಗಡಿ ಇಲ್ಲ ಎಂದು ಅಜ್ಜಿಯರಿಗಾಗಿ ನಡೆದ ಸೌಂದರ್ಯ ಸ್ಪರ್ಧೆ ಸಾಬೀತು ಪಡಿಸಿದೆ.
ಚಿಗುರು ಮಹಿಳಾ ಮಂಡಳಿ ವತಿಯಿಂದ ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಅಜ್ಜಿಯರಿಗಾಗಿ ನಡೆದ ಸೌಂದರ್ಯ ಸ್ಪರ್ಧೆ, ನೋಡುಗರಿಗೆ ಮನೋರಂಜನೆ ನೀಡುವುದರ ಜೊತೆಗೆ ಎಲ್ಲರನ್ನೂ ನಿಬ್ಬೆರಗು ಮಾಡಿತು. ಇಷ್ಟು ದಿನ ಎಲ್ಲರೂ ಫ್ಯಾಷನ್ ಶೋಗಳಲ್ಲಿ ಮಾಡೆಲ್ಗಳ ಹಾಗೂ ಯುವತಿಯರ ಬೆಕ್ಕಿನ ನಡಿಗೆ ಮಾತ್ರ ನೋಡಿದರೆ, ಇಲ್ಲಿ ಅಜ್ಜಿಯರು ಯುವತಿಯರೇ ನಾಚುವಂತೆ ಕ್ಯಾಟ್ ವಾಕ್ ಮಾಡಿದ್ದಾರೆ.
Advertisement
Advertisement
ಈ ಸ್ಪರ್ಧೆಯಲ್ಲಿ 125 ಮಂದಿ ಅಜ್ಜಿಯರು ಪಾಲ್ಗೊಂಡಿದ್ದು, ಎಲ್ಲರೂ ಭಾರತೀಯ ಸಂಪ್ರದಾಯದ ಉಡುಗೆ ತೊಡುಗೆಗಳನ್ನು ಹಾಕಿಕೊಂಡು ವೇದಿಕೆಯ ಮೇಲೆ ಹೆಜ್ಜೆ ಹಾಕಿದರು. ಈ ಸ್ಪರ್ಧೆಯಲ್ಲಿ ಸುಜಾತ ಆಚಾರ್ಯ ಎಂಬ ಅಜ್ಜಿ ಎಲ್ಲರಿಗಿಂತಲೂ ವಿಭಿನ್ನ ರೀತಿಯಲ್ಲಿ ಉಡುಗೆ ತೊಟ್ಟು ಕ್ಯಾಟ್ ವಾಕ್ ಮಾಡಿದ್ದು, ಮೊದಲ ಬಹುಮಾನ ಪಡೆದುಕೊಂಡಿದ್ದಾರೆ.